ಬೆಂಗಳೂರಲ್ಲಿ ನಿರ್ಮಾಣ ಹಂತದ ತಟ್ಟದ ಕುಸಿತ : ಹಲವರಿಗೆ ಗಾಯ, ಇನ್ನೂ ಅವಶೇಷಗಳಡಿ ಸಿಲುಕಿರುವ ಶಂಕೆ

ಈ ಸುದ್ದಿಯನ್ನು ಶೇರ್ ಮಾಡಿ

Building

ಬೆಂಗಳೂರು ಜ.08 : ನಿರ್ಮಾಣ ಹಂತದ ಅಪಾರ್ಟ್ ಮೆಂಟ್ ಕಟ್ಟಡ ಕುಸಿದು ಹಲವರು ಗಾಯಗೊಂಡಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದಿದೆ. ವೈಟ್ ಫೀಲ್ಡ್ ನ ಆಯಕ್ಸೆಂಚರ್ ಕಂಪನಿ ಬಳಿ ನಿರ್ಮಿಸುತ್ತಿದ್ದ ಅಪಾರ್ಟ್ ಮೆಂಟ್ ಕುಸಿದಿದ್ದು ಹಲವು ಕೂಲಿ ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.  ಬೆಳಗ್ಗೆ 6 ಗಂಟೆಯ ವೇಳೆಗೆ ಅಕ್ಸೆಂಚರ್ ಕಂಪೆನಿಯ ಆವರಣದಲ್ಲಿರುವ ಕಟ್ಟಡ ಕುಸಿದಿದ್ದು, ಮೂವರು ಕಾರ್ಮಿಕರು ಸಣ್ಣಪುಟ್ಟಗಾಯಗಳಿಗೊಳಗಾದ ಬಗ್ಗೆ ವರದಿಯಾಗಿದೆ. ಸ್ಥಳದಲ್ಲಿದ್ದ ಕೆಲ ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು , ಅಗ್ನಿಶಾಮಕ ದಳದ ಸಿಬಂದಿಗಳು ಮತ್ತು ಸ್ಥಳದಲ್ಲಿರುವ ಕಾರ್ಮಿಕರು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.

Building 1

ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಸೆಂಚರ್ ಕಂಪನಿ ಸಮೀಪದಲ್ಲಿ ಖಾಸಗಿ ಡೆವಲಪರ್ಸ್ ವತಿಯಿಂದ ಅಪಾರ್ಟ್ ಮೆಂಟ್ ನಿರ್ಮಿಸಲಾಗುತ್ತಿತ್ತು. 3 ನೇ ಅಂತಸ್ತು ನಿರ್ಮಾಣಕ್ಕೆ ಸೆಂಟ್ರಿಂಗ್ ಹಾಕಲಾಗಿದ್ದು, ಸಾರ್ವೆ ಪೈಪ್ ಗಳ ಭಾರ ಹೆಚ್ಚಾಗಿ ಬೆಳಿಗ್ಗೆ ಏಕಾಏಕಿ ಕುಸಿದು ಬಿದ್ದಿದೆ. ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Building 2

Building 4

Building 3

Facebook Comments

Sri Raghav

Admin