ಬೆಂಗಳೂರಲ್ಲಿ ಪಟಾಕಿ ಸದ್ದಿನ ಮಧ್ಯೆ ಗುಂಡಿನ ಮೊರೆತ : ಗುಂಡಿಕ್ಕಿ ಆಂಧ್ರ ಮೂಲದ ಉದ್ಯಮಿ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Parachuri-Surendra

ಬೆಂಗಳೂರು.ಅ.31 : ಆರ್.ಎಸ್. ಎಸ್ಕಾರ್ಯಕರ್ತ ರುದ್ರೇಶ್ ಹತ್ಯೆಯ ಬಿಸಿ ಆರುವ ಮುನ್ನ ಬೆಂಗಳೂರಲ್ಲಿ ಮತ್ತೆ ನೆತ್ತರು ಚೆಲ್ಲಿದೆ. ಆಂದ್ರ ಮೂಲದ ಮತ್ತೊಬ್ಬ ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.  ಪಟಾಕಿ ಸದ್ದಿನ ಮಧ್ಯೆ ಗುಂಡಿನ ಸುರಿಮಳೆ ನಡೆದಿದೆ. ನಗರದ ಸಂಜಯ್ ನಗರದ  ಅಪಾರ್ಟ್ಮೆಂಟ್ ಬಳಿ ಆಂಧ್ರ ಮೂಲದ ಉದ್ಯಮಿಯಾದ ಪರಚೂರಿ ಸುರೇಂದ್ರ ಎಂಬುವವರನ್ನು ಅವರ ಮನೆ ಎದುರೇ ಆರು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ನಿನ್ನೆ ರಾತ್ರಿ ಪಲ್ಸರ್ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದು ಕೊಲೆಗೆ ಪೈನಾನ್ಸ್ ವ್ಯವಹಾರ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ಕಾರಣ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದ್ದು, ಪ್ರಕರಣದ ಕುರಿತು ಸಂಜಯನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲಿಸರಿಂದ ತನಿಖೆ ಆರಂಭವಾಗಿದೆ.  

ನಿನ್ನೆ ದೀಪಾವಳಿ ಪ್ರಯುಕ್ತ ತಮ್ಮ ಫಾರ್ಮ್ ಹೌಗೆ ತೆರಳಿ ದೀಪಾವಳಿ ಆಚರಿಸಿ ಸಂಜಯ್ ನಗರದ ತಮ್ಮ ನಿವಾಸಕ್ಕೆ ವಾಪಾಸಾಗುವ ವೇಳೆ ಪಲ್ಸರ್ ಬೈಕ್ ನಲ್ಲಿ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಸುರೇಂದ್ರ ಅವರ ಮೇಲೆ ಮನೆಯ ಗೇಟ್ ನ ಬಳಿಯೇ ಆರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ತಲೆಗೆ ಒಂದು, ಕತ್ತಿನ ಭಾಗದಲ್ಲಿ 2 ಮತ್ತು ಎದೆಯ ಭಾಗದಲ್ಲಿ ಮೂರು ಗುಂಡುಗಳು ತಗುಲಿ ಅವರು ತೀವ್ರವಾಗಿ ಗಾಯಗೊಂಡಿದ್ದರು. ಪ್ರಕರಣದ ಕುರಿತಂತೆ ಹಂತಕರಿಗಾಗಿ ಶೋಧ ಆರಂಭಿಸಿದ್ದು, ಸ್ಥಳದಲ್ಲಿ ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin