ಬೆಂಗಳೂರಲ್ಲಿ ಪಿಜಿ ಯುವತಿ ಮೇಲೆ ಗ್ಯಾಂಗ್ ರೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

GangRape--01

ಬೆಂಗಳೂರು, ಮೇ 26- ಪಿಜಿಯಲ್ಲಿದ್ದ ನನ್ನ ಮೇಲೆ ಮೂವರು ಅತ್ಯಾಚಾರ ನಡೆಸಿದ್ದಾರೆ. ಇದಕ್ಕೆ ಪಿಜಿ ಮ್ಯಾನೇಜರ್ ಕುಮ್ಮಕ್ಕು ನೀಡಿದ್ದು, ಈ ಕುರಿತಂತೆ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯ ದೀಪಾಂಜಲಿ ನಗರದಲ್ಲಿರುವ ಅನ್ನಪೂರ್ಣ ಪಿಜಿಯಲ್ಲಿ ನಾನು ತಂಗಿದ್ದು, ನನಗೆ ಪರಿಚಯಸ್ಥನಾದ ಕಾರ್ತಿಕ್ ಮತ್ತು ಆತನ ಇಬ್ಬರು ಸ್ನೇಹಿತರು ಪಿಜಿಗೆ ನುಗ್ಗಿ ನನ್ನ ಮೇಲೆ ಅತ್ಯಾಚಾರ ನಡೆಸಿ ಆ ದೃಶ್ಯವನ್ನು ಚಿತ್ರೀಕರಣ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದಾರೆ.

ಕಾಮುಕರ ಈ ಕರ್ಮಕಾಂಡಕ್ಕೆ ಪಿಜಿ ಮ್ಯಾನೇಜರ್ ಸಹಕರಿಸಿದ್ದಾರೆ. ಈ ಕುರಿತಂತೆ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ಆರೋಪಿಗಳ ಪರವಾಗಿ ನಿಂತು ನನಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ನೊಂದ ಯುವತಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡರು.
ಪಿಜಿ ಮ್ಯಾನೇಜರ್ ನನ್ನ ರೂಮಿನ ನಕಲಿ ಕೀ ಮಾಡಿಸಿಕೊಂಡು ನನ್ನ ಚಿನ್ನದ ಒಡವೆಗಳನ್ನು ಕದ್ದಿದ್ದರು. ಅದನ್ನು ಹಿಂದಿರುಗಿಸುವಂತೆ ಕೇಳಿಕೊಂಡಾಗ ನಾನು ಹೇಳಿದಂತೆ ಕೇಳಬೇಕು. ಇಬ್ಬರು ಯುವಕರೊಂದಿಗೆ ಒಂದು ರಾತ್ರಿ ಕಳೆಯಬೇಕು ಎಂದು ಒತ್ತಾಯಿಸಿದ್ದರು.

ಅವರ ಈ ಒತ್ತಾಯಕ್ಕೆ ನಾನು ಮಣಿಯದಿದ್ದಾಗ ಕಾರ್ತಿಕ್ ಮತ್ತು ಆತನ ಸ್ನೇಹಿತರು ನನ್ನ ರೂಮಿಗೆ ನುಗ್ಗಿ ಮತ್ತು ಬರಿಸುವ ಔಷಧಿಯಿಂದ ನನ್ನ ಜ್ಞಾನ ತಪ್ಪಿಸಿ ಅತ್ಯಾಚಾರವೆಸಗಿದ್ದಾರೆ. ಮಾತ್ರವಲ್ಲ, ಅತ್ಯಾಚಾರದ ದೃಶ್ಯಗಳನ್ನು ಸೆರೆ ಹಿಡಿದುಕೊಂಡು ನೀನು ನಾವು ಹೇಳಿದಂತೆ ಕೇಳಬೇಕು. ನಾವು ತೋರಿಸುವ ಯುವಕರೊಂದಿಗೆ ಸಹಕರಿಸಬೇಕು. ಇಲ್ಲದಿದ್ದರೆ ಅತ್ಯಾಚಾರದ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು.

ಪಿಜಿ ಮ್ಯಾನೇಜರ್ ಹಾಗೂ ಕಾರ್ತಿಕ್ ತಂಡದ ವಿರುದ್ಧ ಬ್ಯಾಟರಾಯನಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ಪೊಲೀಸರು ಅತ್ಯಾಚಾರದ ದೃಶ್ಯಾವಳಿಯ ಸಿಡಿಯನ್ನು ವಶಪಡಿಸಿಕೊಂಡು ಆರೋಪಿಗಳೊಂದಿಗೆ ಶಾಮೀಲಾಗಿ ನನಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ನನಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ಯುವತಿ ಮನವಿ ಮಾಡಿಕೊಂಡಿದ್ದಾರೆ.

Facebook Comments

Sri Raghav

Admin