ಬೆಂಗಳೂರಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ರೈಲಿಗೆ ಸಿಲುಕಿ ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Train-Suicide

ಬೆಂಗಳೂರು,ಫೆ.1-ಮೂರು ಪ್ರತ್ಯೇಕ ರೈಲ್ವೆ ಪ್ರಕರಣಗಳಲ್ಲಿ ಮಹಿಳೆ ಸೇರಿ ಮೂವರು ರೈಲಿಗೆ ಸಿಕ್ಕಿ ಮೃತಪಟ್ಟಿದ್ದು , ಇವರ ಹೆಸರು, ವಿಳಾಸ ತಿಳಿದುಬಂದಿಲ್ಲ.

ಯಶವಂತಪುರ ರೈಲ್ವೆ:
ಯಶವಂತಪುರ-ನಿಡುವಂದ ರೈಲ್ವೆಗೇಟ್ ಮಧ್ಯೆ ಇಂದು ಮುಂಜಾನೆ ಸುಮಾರು 25 ವರ್ಷದ ಯುವಕ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದಾನೆ. ಈ ಯುವಕನ ಹೆಸರು-ವಿಳಾಸ ತಿಳಿದುಬಂದಿಲ್ಲ.

ಸಿಟಿ ರೈಲ್ವೆ:
ಹೆಜ್ಜಾಲ-ಬಿಡದಿ ಮಧ್ಯೆ ಸುಮಾರು 30 ವರ್ಷದ ಮಹಿಳೆ ನಿನ್ನೆ ರಾತ್ರಿ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದು , ಈಕೆಯ ಹೆಸರು, ವಿಳಾಸ ತಿಳಿದುಬಂದಿಲ್ಲ. ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿಡಲಾಗಿದೆ.

ಕಂಟೋನ್ಮೆಂಟ್:
ಕಂಟೋನ್ಮೆಂಟ್ ರೈಲ್ವೆ-ಈಸ್ಟ್ ರೈಲ್ವೆ ಸಮೀಪದ ಐಟಿಪಿ ಕಾರ್ಖಾನೆ ಹಿಂಭಾಗ ರಾತ್ರಿ ಸುಮಾರು 25 ವರ್ಷದ ವ್ಯಕ್ತಿ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದು , ಈತನ ಹೆಸರು-ವಿಳಾಸ ತಿಳಿದುಬಂದಿಲ್ಲ.
ಶವವನ್ನು ಬೌರಿಂಗ್ ಆಸ್ಪತ್ರೆಯಲ್ಲಿಡಲಾಗಿದೆ. ಇವರ ವಾರಸುದಾರರು ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin