ಬೆಂಗಳೂರಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ರೈಲಿಗೆ ಸಿಲುಕಿ ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Train-Suicide

ಬೆಂಗಳೂರು, ಮಾ.7-ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನಗರ ರೈಲು ನಿಲ್ದಾಣದ ಫ್ಲಾಟ್‍ಫಾರಂ ನಂ.1ರ ಬಿಎನ್‍ಸಿ ಕಡೆಯ ಟ್ರಾಲಿಪಾತ್ ಹತ್ತಿತರ ಸುಮಾರು 55-60 ವರ್ಷದ ವ್ಯಕ್ತಿ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ. ಸಾಧಾರಣ ಶರೀರ, ಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಬಿಳಿ, ಕೆಂಪು, ನೀಲಿಗೆರೆಯ ತುಂಬು ತೋಳಿನ ಶರ್ಟ್, ಪಾಚೀ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಶವವನ್ನು ವಿಕ್ಟೋರಿಯಾ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.  ವಾರಸುದಾರರು ಇದ್ದರೆ ಬೆಂಗಳೂರು ನಗರ ರೈಲ್ವೆ ಠಾಣೆಯನ್ನು 080-22871057, 22156370, 9480802113ನ್ನು ಸಂಪರ್ಕಿಸಲು ಕೋರಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಸುಮಾರು 50 ವರ್ಷದ ವ್ಯಕ್ತಿ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾನೆ. ನಗರ ರೈಲ್ವೆ ನಿಲ್ದಾಣದ ದಂಡು ರೈಲ್ವೆ ನಿಲಾಣ ಕಡೆ ಪಾಯಿಂಟ್ ನಂ.102ರ ಹತ್ತಿರ ಮಾ.4 ರಂದು ವ್ಯಕ್ತಿ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾನೆ.

ಸಾಧಾರಣ ಶರೀರ, ಗೋಧಿ ಮೈಬಣ್ಣ, ಕೋಲುಮುಖ ಹೊಂದಿದ್ದು, ನೀಲಿ ಪ್ಯಾಂಟ್, ಚೌಕಳಿ ಶರ್ಟ್ ಧರಿಸಿದ್ದಾನೆ.  ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವ ಇರಿಸಲಾಗಿದ್ದು, ಹೆಚ್ಚಿನ ವಿವರಗಳಿಗೆ ನಗರ ರೈಲ್ವೆ ಪೊಲೀಸ್‍ಸ್ಟೇಷನ್ 080-22871057, 22156370, 22871291, 94380802113ಗೆ ತಿಳಿಸಲು ಕೋರಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin