ಬೆಂಗಳೂರಲ್ಲಿ ಪ್ರಧಾನಮಂತ್ರಿ ಮೋದಿ ಕಚೇರಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Office--01

ಬೆಂಗಳೂರು, ಜು.23-ದಕ್ಷಿಣ ಭಾರತದವರೆಗೆ ಪ್ರಧಾನಮಂತ್ರಿ ಕಚೇರಿ ಗಗನಕುಸುಮವೇ ಸರಿ. ಪ್ರಧಾನಿಗಳ ಭೇಟಿಗೆ ಎಲ್ಲಾ ಕೆಲಸ ಬಿಟ್ಟು ದೆಹಲಿಯತ್ತ ಪ್ರಯಾಣ ಮಾಡಲೇಬೇಕಾದ ಪರಿಸ್ಥಿತಿ ಇತ್ತು. ಆದರೆ ಈ ಅಂತರವನ್ನು ದೂರ ಮಾಡಲು ತೀರ್ಮಾನಿಸಿರುವ ನರೇಂದ್ರ ಮೋದಿ ಸಿಲಿಕಾನ್ ಸಿಟಿಯಲ್ಲೇ ಪ್ರಧಾನಮಂತ್ರಿ ಕಚೇರಿ ತೆರೆಯಲು ತೀರ್ಮಾನಿಸಿದ್ದಾರೆ.  ಪ್ರತಿ ಕೆಲಸಕ್ಕೂ ದೆಹಲಿಗೆ ತೆರಳಬೇಕಿದ್ದ ದಕ್ಷಿಣ ಭಾರತೀಯರ ಅನಿವಾರ್ಯತೆಯನ್ನು ದೂರಗೊಳಿಸುವ ಉದ್ದೇಶದಿಂದ ಮೋದಿಯವರು ಬೆಂಗಳೂರಿನಲ್ಲಿ ಪ್ರಧಾನಿ ಕಚೇರಿ ತೆರೆಯಲು ಸದ್ದಿಲ್ಲದೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಬೆಂಗಳೂರಿನಲ್ಲಿ ಮನೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಪ್ರಧಾನಿ ಕಚೇರಿ ಸ್ಥಾಪನೆಗೆ ಜಾಗದ ಹುಡುಕಾಟವೂ ನಡೆದಿದೆ ಎನ್ನಲಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಬ್ಬಾಗಿಲಿಗೆ ಕರ್ನಾಟಕವೇ ಕೇಂದ್ರಬಿಂದು ಎಂಬುದನ್ನು ಅರಿತಿರುವ ಮೋದಿಯವರು ತಮ್ಮ ಚಾಣಾಕ್ಷತನ ಪ್ರದರ್ಶಿಸಿ ಮತ್ತೆ ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷವನ್ನು ಪ್ರಾಬಲ್ಯಗೊಳಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಕಚೇರಿ ಸ್ಥಾಪನೆಗೆ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ದೇಶದ ಹಲವಾರು ರಾಜ್ಯಗಳಲ್ಲಿ ಕೇಸರಿ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗಿರುವ ಅಮಿತ್‍ಷಾ -ಮೋದಿ ಜೋಡಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ರಣತಂತ್ರ ರೂಪಿಸುತ್ತಿದ್ದು, ಪ್ರಧಾನಿ ಕಚೇರಿ ಸ್ಥಾಪನೆಯೂ ಇದರ ಒಂದು ಭಾಗವೇ ಎಂದು ಉಲ್ಲೇಖಿಸಲಾಗುತ್ತಿದ್ದು, ಅವರ ಚಾಣಾಕ್ಷ ನಡೆ ರಾಜ್ಯದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುವುದು ಕಾದುನೋಡಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin