ಬೆಂಗಳೂರಲ್ಲಿ ಮನೆಗೆ ನುಗ್ಗಿ ಮಹಿಳೆಯನ್ನು ಕೊಂದು ಸರ ಕಿತ್ತೊಯ್ದ ದುಷ್ಕರ್ಮಿ..!

ಈ ಸುದ್ದಿಯನ್ನು ಶೇರ್ ಮಾಡಿ

Women-Murder

ಬೆಂಗಳೂರು, ಏ.20- ಹಾಡ ಹಗಲೇ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿ ಮಹಿಳೆಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಕೊರಳಲ್ಲಿದ್ದ 60 ಗ್ರಾಂ ಸರದೊಂದಿಗೆ ಪರಾರಿಯಾಗಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹುಣಸಮಾರನಹಳ್ಳಿಯ ಭಾರತೀ ನಗರದ ನಿವಾಸಿ ಚಂದ್ರಕಲಾ (35) ಕೊಲೆಯಾದ ಮಹಿಳೆ.  ಚಂದ್ರಕಲಾ ಅವರ ಪತಿ ಕೆಲಸಕ್ಕೆ ತೆರಳಿದ್ದು, ಇವರ ಇಬ್ಬರು ಮಕ್ಕಳು ಅಜ್ಜಿ ಮನೆಯಲ್ಲಿದ್ದಾರೆ.  ನಿನ್ನೆ ಮಧ್ಯಾಹ್ನ 3.30ರ ಸಮಯದಲ್ಲಿ ಚಂದ್ರಕಲಾ ಮನೆಯಲ್ಲಿ ಒಬ್ಬರೇ ಇದ್ದಾಗ ಮನೆಯೊಳಗೆ ನುಗ್ಗಿದ ದುಷ್ಕರ್ಮಿ ಇವರ ಕುತ್ತಿಗೆ ಬಿಗಿದು ಕೊಲೆ ಮಾಡಿ ನಂತರ ಇವರ ಕೊರಳಲ್ಲಿದ್ದ 60 ಗ್ರಾಂ ಸರದೊಂದಿಗೆ ಪರಾರಿಯಾಗಿದ್ದಾನೆ.

ಸಂಜೆ 4.30ರ ಸಮಯದಲ್ಲಿ ಚಂದ್ರಕಲಾ ಅವರ ತಾಯಿ ಮನೆಗೆ ಬಂದಾಗ ಮಗಳು ಕುಸಿದು ಬಿದ್ದಿರುವುದನ್ನು ಗಮನಿಸಿ ನೆರವಿಗಾಗಿ ಅಕ್ಕ ಪಕ್ಕದವರನ್ನು ಕೂಗಿದ್ದಾರೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದು , ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದಾಗ ಚಂದ್ರಕಲಾ ಕೊಲೆಯಾಗಿರುವುದು ಗೊತ್ತಾಗಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಚಿಕ್ಕಜಾಲ ಠಾಣೆ ಪೊಲೀಸರು ಶವವನ್ನು ಅಂಬೇಡ್ಕರ್ ಮೆಡಿಕಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin