ಬೆಂಗಳೂರಲ್ಲಿ ಮುಂದುವರೆದ ಸರಗಳ್ಳರ ಹಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

chain--snatcher

ಬೆಂಗಳೂರು, ಮಾ.23- ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ಸಂಜೆ ಎರಡು ಕಡೆ ಹಾಗೂ ಬೆಳಗ್ಗೆ ಒಂದು ಕಡೆ ಸರಗಳ್ಳತನ ನಡೆಸಿ ಮತ್ತೊಂದು ಕಡೆ ಸರಗಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ನಡೆದಿದೆ.  ಅನ್ನಪೂರ್ಣೇಶ್ವರಿನಗರ: ನಾಗರಬಾವಿ 11ನೆ ಬ್ಲಾಕ್‍ನಲ್ಲಿ ಶಿವನಂಜಮ್ಮ ಎಂಬುವವರು ರಾತ್ರಿ 9.35ರ ಸಮಯದಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಸರಗಳ್ಳರು ಇವರ ಕೊರಳಲ್ಲಿದ್ದ 40 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ.

ಕೆಂಗೇರಿ: ಬಿಎಸ್‍ಕೆ 6ನೆ ಹಂತದ 9ನೆ ಮುಖ್ಯರಸ್ತೆ ನಿವಾಸಿ ಇಂಚರಾ ಎಂಬುವವರು ಸಂಜೆ 5.30ರಲ್ಲಿ ಚಿನ್ಮಯಿ ಶಾಲೆ ಬಳಿ ನಡೆದು ಹೋಗುತ್ತಿದ್ದಾಗ ಬೈಕ್‍ನಲ್ಲಿ ಹಿಂಬಾಲಿಸಿ ಬಂದ ಸರಗಳ್ಳರು 25 ಗ್ರಾಂ ಸರ ಎಗರಿಸಿದ್ದಾರೆ.

ಜ್ಞಾನಭಾರತಿ: ಸುವರ್ಣ ಜ್ಯೋತಿ ಲೇಔಟ್‍ನಲ್ಲಿ ರಾತ್ರಿ ನಡೆದು ಹೋಗುತ್ತಿದ್ದ ಮಹಿಳೆಯ ಸರ ಎಗರಿಸಲು ಸರಗಳ್ಳರು ಮುಂದಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಹಿಳೆ ಸರ ಬಿಗಿಯಾಗಿ ಹಿಡಿದು ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದಂತೆ ಸರಗಳ್ಳರು ಪರಾರಿಯಾಗಿದ್ದಾರೆ.

ಪುಟ್ಟೇನಹಳ್ಳಿ: ಜೆಪಿ ನಗರದ ಡಾಲರ್ಸ್ ಕಾಲೋನಿ ನಿವಾಸಿ ಶಕುಂತಲಾ ಎಂಬುವವರು ಬೆಳಗ್ಗೆ 5.30ರಲ್ಲಿ ತಮ್ಮ ಮನೆ ಬಳಿ ವಾಕಿಂಗ್ ಮಾಡುತ್ತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಸರಗಳ್ಳರು 30 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ. ಈ ನಾಲ್ಕೂ ಪ್ರಕರಣಗಳನ್ನು ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin