ಬೆಂಗಳೂರಲ್ಲಿ ರೌಡಿಶೀಟರ್’ಗೆ ಪೊಲೀಸರಿಂದ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

Rowdysheetar--001

ಬೆಂಗಳೂರು, ಜೂ.10-ಹಳೇ ದ್ವೇಷದಿಂದ ಸ್ನೇಹಿತನನ್ನು ಕೊಲೆ ಮಾಡಲು ಯತ್ನಿಸಿದ್ದ ರೌಡಿಶೀಟರ್ ಮೇಲೆ ವಿದ್ಯಾರಣ್ಯಪುರ ಪೊಲೀಸರು ಗುಂಡು ಹಾರಿಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.   ರೌಡಿಶೀಟರ್ ನಕುಲ್ ಕಾಲಿಗೆ ಗುಂಡು ತಗುಲಿದ್ದು , ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.   ಪುರುಷೋತ್ತಮ್ ಎಂಬಾತನ ಪ್ರಕರಣದಲ್ಲಿ ಜೈಲು ಸೇರಿದ್ದ ರೌಡಿಶೀಟರ್ ನಕುಲ್ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಹಳೆಯ ದ್ವೇಷದಿಂದ ಸ್ನೇಹಿತ ಜೋಸೆಫ್ ಹತ್ಯೆಗೆ ಸಂಚು ರೂಪಿಸಿದ್ದ ಈತ ನಿನ್ನೆ ಸಂಜೆ ರೈನ್‍ಬೋ ಲೇಔಟ್‍ನಲ್ಲಿರುವ ಜೋಸೆಫ್ ಮನೆಗೆ ದಾಳಿ ಮಾಡಿ ಆತನನ್ನು ಮನೆಯಿಂದ ಹೊರಗೆಳೆದುಕೊಂಡು ಮನಬಂದಂತೆ ಥಳಿಸಿ ಕೊಲೆಗೆ ಯತ್ನಿಸಿದ್ದಾನೆ.



ಘಟನೆ ಬಗ್ಗೆ ಮಾಹಿತಿ ತಿಳಿದ ವಿದ್ಯಾರಣ್ಯಪುರ ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ಬಂಧಿಸಲು ಮುಂದಾದಾಗ ಹೋಂಗಾರ್ಡ್ ಸಿದ್ದರಾಜು ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ.   ತಕ್ಷಣ ವಿದ್ಯಾರಣ್ಯಪುರ ಇನ್‍ಸ್ಪೆಕ್ಟರ್ ಪುನೀತ್ ಅವರು ಆತ್ಮರಕ್ಷಣೆಗಾಗಿ ತಮ್ಮ ಪಿಸ್ತೂಲಿನಿಂದ ಒಂದು ಸುತ್ತಿನ ಗುಂಡು ಹಾರಿಸಿದಾಗ ಒಂದು ಗುಂಡು ರೌಡಿಶೀಟರ್ ನಕುಲ್ ಕಾಲಿಗೆ ತಗುಲಿ ಕುಸಿದುಬಿದ್ದಾಗ ಈತನನ್ನು ಬಂಧಿಸಿದ್ದಾರೆ.   ಕಾಲಿಗೆ ಗುಂಡು ತಗುಲಿದ್ದರಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.   ಕೊಲೆ, ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ರೌಡಿಶೀಟರ್ ನಕುಲ್ ಭಾಗಿಯಾಗಿದ್ದ .

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin