ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿದ್ದ ಬಾಲಕಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Cylinder-Blast

ಬೆಂಗಳೂರು, ಏ.6- ಸಿಲಿಂಡರ್ ಸ್ಫೋಟದಿಂದ ಗಂಭೀರ ಗಾಯ ಗೊಂಡಿದ್ದ ನಾಲ್ಕು ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ದಾಸರ ಹಳ್ಳಿ ಸಮೀಪದ ಕಲ್ಯಾಣ ನಗರದ 4ನೇ ಅಡ್ಡರಸ್ತೆ ನಿವಾಸಿ ದೇವರಾಜು ಎಂಬುವರ ಪುತ್ರಿ ದೇವಿಕಾ (4) ಮೃತಪಟ್ಟ ನತದೃಷ್ಟ.  ಮೂಲತಃ ಪಾವಗಡ ತಾಲೂಕಿನವರಾದ ದೇವರಾಜು ಮನೆಯಲ್ಲಿ ನಿನ್ನೆ ಮುಂಜಾನೆ ಸಿಲಿಂಡರ್ ಸ್ಫೋಟಗೊಂಡಿತ್ತು. ಪರಿಣಾಮವಾಗಿ 4 ಮಕ್ಕಳೂ ಸೇರಿದಂತೆ 8 ಮಂದಿ ಗಂಭೀರಗಾಯಗೊಂಡಿದ್ದು, ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಾಯಾಳುಗಳ ಪೈಕಿ ಬಾಲಕಿ ದೇವಿಕಾ ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ 6.30ರಲ್ಲಿ ಮೃತಪಟ್ಟಿದ್ದಾಳೆ. ಖಾಸಗಿ ಕಂಪೆನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರುವ ದೇವರಾಜು ಕುಟುಂಬ ಹಲವು ತಿಂಗಳುಗಳಿಂದ ದಾಸರಹಳ್ಳಿಯಲ್ಲಿ ನೆಲೆಸಿದೆ. ಮೊನ್ನೆ ರಾತ್ರಿ ಗ್ಯಾಸ್ ಸಿಲಿಂಡರ್ ಆಫ್ ಮಾಡದೆ ಮಲಗಿದ್ದಾಗ ಅನಿಲ ಸೋರಿಕೆಯಾಗಿದ್ದು, ನಿನ್ನೆ ಮುಂಜಾನೆ ಲೈಟ್ ಹಾಕಿದಾಗ ಸ್ಫೋಟಗೊಂಡು ಮನೆಯಲ್ಲಿದ್ದವರೆಲ್ಲ ಗಾಯಗೊಂಡಿದ್ದನ್ನು ಸ್ಮರಿಸಬಹುದು.

Facebook Comments

Sri Raghav

Admin