ಬೆಂಗಳೂರಲ್ಲಿ 3 ಪ್ರತ್ಯೇಕ ಪ್ರಕರಣಗಳಲ್ಲಿ ರೈಲಿಗೆ ಸಿಕ್ಕಿ ಮೂವರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Train--01

ಬೆಂಗಳೂರು, ಮಾ.17- ನಗರದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ವ್ಯಕ್ತಿಗಳು ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದು, ಇವರ ಹೆಸರು-ವಿಳಾಸ ತಿಳಿದುಬಂದಿಲ್ಲ. ವಾರಸುದಾರರು ಈ ಕೂಡಲೇ ಸಂಬಂಧಿಸಿದ ರೈಲ್ವೆ ಪೊಲೀಸರನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.
ಸಿಟಿ ರೈಲ್ವೆ: ಕೆಂಗೇರಿ-ಹೆಬ್ಬಾಳ ರೈಲ್ವೆ ನಿಲ್ದಾಣಗಳ ಮಧ್ಯೆ ವ್ಯಕ್ತಿಯೊಬ್ಬರು ಇಂದು ಬೆಳಗ್ಗೆ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ.
ಕಂಟೋನ್ಮೆಂಟ್ ರೈಲ್ವೆ: ಬೈಯಪ್ಪನಹಳ್ಳಿಯ ಪ್ಯಾನಲ್ ಬಳಿ ಸುಮಾರು 60 ವರ್ಷದ ವ್ಯಕ್ತಿ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ. ಇದೇ ವ್ಯಾಪ್ತಿಯ ಮತ್ತೊಂದು ಕಡೆ ವೈಟ್‍ಫೀಲ್ಡ್ ರೈಲ್ವೆ ನಿಲ್ದಾಣದ ಸಮೀಪ ಸುಮಾರು 40 ವರ್ಷದ ಗಂಡಸು ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ.

Facebook Comments

Sri Raghav

Admin