ಬೆಂಗಳೂರಲ್ಲೇ ತಯಾರಾಗಲಿದೆ ಆಪಲ್ ಐಫೋನ್’ಗಳು

ಈ ಸುದ್ದಿಯನ್ನು ಶೇರ್ ಮಾಡಿ

i-phone
ಬೆಂಗಳೂರು,ಡಿ.30- ಇನ್ನು ಮುಂದೆ ಭಾರತಕ್ಕೆ ಬೆಂಗಳೂರಿನಲ್ಲಿ ತಯಾರಾದ ಆಪಲ್  ಐ ಫೋನ್‍ಗಳು ಸರಬರಾಜು ಆಗಲಿವೆ. ಆಪಲ್ಗಾಗಿ ಮೊಬೈಲ್ ತಯಾರಿಸುವ ತೈವಾನ್ ಕಂಪನಿಯಾದ ವಿಸ್ಟ್ರಾನ್, ಪೀಣ್ಯದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ನಿರ್ಧರಿಸಿದೆ.  ಇಲ್ಲಿ ಐಫೋನ್‍ಗಳ ಉತ್ಪಾದನೆ ಸದ್ಯದಲ್ಲೇ ಆರಂಭವಾಗಲಿದೆ. ಮುಂದಿನ ಏಪ್ರಿಲ್‍ನಿಂದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಐಫೋನ್‍ಗಳು ಉತ್ಪಾದನೆಯಾಗಲಿವೆ ಎಂದು ಮೂಲಗಳು ಹೇಳಿವೆ. ಮೊಬೈಲ್ ಸೆಟ್‍ಗಳನ್ನು ಸ್ಥಳೀಯವಾಗಿಯೇ ಜೋಡಿಸುವ ಬಗ್ಗೆ ಆಪ  ಗಂಭೀರ ಚಿಂತನೆ ನಡೆಸಿದೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಬೃಹತ್ ಪ್ರಮಾಣದಲ್ಲಿ ಇದು ಕಾರ್ಯಾರಂಭವಾಗಲಿದೆ. ಇದಕ್ಕಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸ್ಥಳೀಯವಾಗಿಯೇ ಆಪಲ್  ಐಫೋನ್ ಉತಾದನೆಯಾಗುವುದರಿಂದ ಗ್ರಾಹಕರಿಗೆ ಅಗ್ಗವಾಗುವ ನಿರೀಕ್ಷೆ ಇದೆ.  ಏಕೆಂದರೆ, ಐ- ಫೋನ್ ಆಮದಿಗೆ ಶೇಕಡ 12.5ರಷ್ಟು ಆಮದು ಸುಂಕ ವಿಸಲಾಗುತ್ತಿದೆ. ಆಪಲ್‍ನ ಮತ್ತೊಂದು ಪ್ರಮುಖ ಉತ್ಪಾದಕ ಕಂಪನಿಯಾಗಿರುವ ತೈವಾನ್ನ ಫಾಕ್ಸ್ಕಾನ್ ಈಗಾಗಲೇ ಮಹಾರಾಷ್ಟ್ರದಲ್ಲಿ ಉತ್ಪಾದನಾ ಘಟಕ ಆರಂಭಿಸುವ ನಿರ್ಧಾರವನ್ನು ಪ್ರಕಟಿಸಿದೆ. ಈ ಘಟಕ ಕೇವಲ ಆಪಲ್ಉತ್ಪನ್ನಗಳನ್ನು ಮಾತ್ರ ತಯಾರಿಸಲಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

 

Facebook Comments

Sri Raghav

Admin