ಬೆಂಗಳೂರಿಗರಿಗೆ ಇಲ್ಲೊಂದಿದೆ ಮತ್ತೊಂದು ಆತಂಕಕಾರಿ ಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

temprature
ಬೆಂಗಳೂರು, ನ.11- ಈಗಾಗಲೇ ಮಾಲಿನ್ಯ ಭೀತಿಯಿಂದ ಕಂಗಾಲಾಗಿರುವ ಬೆಂಗಳೂರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನವೆಂಬರ್‍ನಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಇಂತಹದೊಂದು ಆತಂಕಕಾರಿ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ಹೊರಹಾಕಿದೆ.ನವೆಂಬರ್ ಮೊದಲ ವಾರದಲ್ಲಿ ಸಾಮಾನ್ಯವಾಗಿ 21 ಡಿಗ್ರಿ ಸೆಲ್ಷಿಯಸ್ ಇರುತ್ತಿದ್ದ ತಾಪಮಾನ, ಈ ಬಾರಿ ಮೊದಲ ವಾರದಲ್ಲೇ 31 ಡಿಗ್ರಿಯಷ್ಟಿದೆ. ನವೆಂಬರ್ 11ರ ನಂತರ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಹಿಂಗಾರು ಕೊರತೆಯಿಂದ ನಗರದಲ್ಲಿ ಈ ಸ್ಥಿತಿ ಎದುರಾಗಿದ್ದು, ಇದೇ ಸ್ಥಿತಿ ಮುಂದುವರೆದಲ್ಲಿ ಬೇಸಿಗೆಯಲ್ಲಿ ಬೆಂಗಳೂರು ಧಗ-ಧಗಿಸಲಿದೆ.ವಾಡಿಕೆಯಂತೆ ಚಳಿಯ ಅಬ್ಬರಕ್ಕೆ ನಲುಗಬೇಕಿದ್ದ ಸಿಲಿಕಾನ್ ಸಿಟಿ ಇದೀಗ ಹೆಚ್ಚುತ್ತಿರುವ ತಾಪಮಾನಕ್ಕೆ ಬೆಂದು ಹೋಗುತ್ತಿದೆ.

2002ರ ನವೆಂಬರ್ ಅಂತಿಮದಲ್ಲಿ ನಗರದಲ್ಲಿ ಅತಿಹೆಚ್ಚು ಅಂದ್ರೆ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಆದರೆ ಪ್ರಸ್ತುತ ನವೆಂಬರ್ ಮೊದಲ ವಾರದಲ್ಲೇ ಈ ತಾಪಮಾನ ದಾಟಿದ್ದು, ನಗರದಲ್ಲಿ ಬಿಸಿಲಿನ ಬೇಗೆ ಹೆಚ್ಚುವ ಮುನ್ಸೂಚನೆ ದೊರೆತಿದೆ.

► Follow us on –  Facebook / Twitter  / Google+

 

 

► Follow us on –  Facebook / Twitter  / Google+

Facebook Comments

Sri Raghav

Admin