ಬೆಂಗಳೂರಿಗರೇ ನಿಮ್ಮ ಮಕ್ಕಳಿಗೆ ಇಷ್ಟದ ತಿನಿಸು ತಿನಿಸುವ ಮೊದಲು ಇದನ್ನೊಮ್ಮೆ ಓದಿ..!

ಈ ಸುದ್ದಿಯನ್ನು ಶೇರ್ ಮಾಡಿ

Child--01
ಬೆಂಗಳೂರು, ನ.6- ದೇಶದಲ್ಲಿ ಮಕ್ಕಳ ಆರೋಗ್ಯದ ಸಮಸ್ಯೆಗಳು ಯಾವಾಗಲೂ ತೀವ್ರವಾದ ಆತಂಕವನ್ನು ಉಂಟು ಮಾಡುತ್ತಿದ್ದು, ಸಂಶೋಧನಾ ಸಂಸ್ಥೆ ಕಂಟರ್ ಐಎಂಆರ್‍ಬಿ ಮತ್ತು ಡಾ.ಬಾತ್ರಾಸ್ ಹೋಮಿಯೋಪಥಿ ಪ್ರಾಯೋಜಿಸಿದ ಸಮೀಕ್ಷೆಯ ಪ್ರಕಾರ, ಬೆಂಗಳೂರಿನ ಶೇ.66ರಷ್ಟು ಪೋಷಕರು ತಮ್ಮ ಮಕ್ಕಳಿಗೆ ಇಷ್ಟವಾದ ಆಹಾರ ತಿನ್ನುವುದನ್ನು ಅಥವಾ ಹೊರಗಡೆ ಆಡುವುದಕ್ಕೆ ಅಸ್ವಸ್ಥರಾಗುತ್ತಾರೆಂಬ ಕಾರಣಕ್ಕಾಗಿ, ನಿರ್ಬಂಧಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ. ಈ ಸಮೀಕ್ಷೆಯನ್ನು ಕಂಟರ್ ಐಎಂಆರ್‍ಬಿ ದೇಶದ ಎಂಟು ಪ್ರಮುಖ ನಗರಗಳಲ್ಲಿ ನಡೆಸಿದ್ದು, 2-10 ವರ್ಷದ ಮಕ್ಕಳಿರುವ 1,617 ಜನರು ಪಾಲ್ಗೊಂಡಿದ್ದರು. (ತಾಯಿ ಅಥವಾ ತಂದೆ) ಇವರು ಸಾಮಾಜಿಕ ಆರ್ಥಿಕ ವರ್ಗ ಎ ಮತ್ತು ಬಿಗಳಿಗೆ ಸೇರಿದವರಾಗಿದ್ದರು.

ಮಕ್ಕಳ ಆರೋಗ್ಯದ ಸಮಸ್ಯೆಗಳನ್ನು ಮತ್ತು ದೀರ್ಘಕಾಲಿಕ ಲಾಭಗಳಿರುವ ಅತ್ಯುತ್ತಮ ಚಿಕಿತ್ಸೆಯ ಆ್ಯಕಗಳನ್ನು ತಿಳಿದುಕೊಳ್ಳುವುದು ಈ ಸಮೀಕ್ಷೆಯ ಉದ್ದೇಶವಾಗಿತ್ತು. ಬೆಂಗಳೂರಿನ ಮಕ್ಕಳಲ್ಲಿನ ಅಸ್ವಸ್ಥದ ಸೂಚ್ಯಂಕವನ್ನು ಆಧರಿಸಿ, ಅವರಲ್ಲಿ ಶೇ.63ರಷ್ಟು ಮಕ್ಕಳು ಪ್ರತಿ 3 ತಿಂಗಳಿಗೊಮ್ಮೆ ಅಸ್ವಸ್ಥರಾಗಿದ್ದು ಇದರಿಂದ ಅವರ ಪೋಷಕರು ಮಕ್ಕಳು ನೆಗಡಿ, ಕೆಮ್ಮಿಗೆ ತುತ್ತಾಗುತ್ತಾರೆಂಬ ಭಯದಲ್ಲಿ ಅವರನ್ನು ಐಸ್ ಕ್ರೀಂ, ಚಾಕಲೇಟ್, ಪಾಸ್ಟ್ರೀ,ಪಾನೀಯಗನ್ನು ಸೇವಿಸದಂತೆ ನಿರ್ಬಂಧಿಸುತ್ತಾರೆ. ಇದಲ್ಲದೆ ಧೂಳು ಮತ್ತು ಮಾಲಿನ್ಯದಿಂದ ಅಲರ್ಜಿ ಉಂಟಾಗುತ್ತದೆಂಬ ಭಯದಲ್ಲಿ ಪೋಷಕರು ಮಕ್ಕಳನ್ನು ಹೊರಗಡೆ ಆಡದಂತೆ ನಿರ್ಬಂಧಿಸುತ್ತಿದ್ದರು ಮತ್ತು ಇತರ ಮಕ್ಕಳಿಂದ ಸೋಂಕನ್ನು ಪಡೆಯುತ್ತಾರೆಂಬ ಭಯದಲ್ಲಿ ಇತರ ಮಕ್ಕಳೊಂದಿಗೆ ಆಡಲು ಬಿಡುತ್ತಿರಲಿಲ್ಲ.

ಮಕ್ಕಳ ಅತ್ಯುತ್ತಮ ಶಿಕ್ಷಣಕ್ಕೆ ಅವರ ಉತ್ತಮ ಆರೋಗ್ಯವೇ ಪ್ರಧಾನವೆಂಬುದನ್ನು ಮನಗಂಡು, ಅಸ್ವಸ್ಥದಿಂದ ಶಾಲೆಗೆ ರಜೆ ಹಾಕುವುದರಿಂದಾಗಿ ಮಕ್ಕಳಿಗೂ ಮತ್ತು ಅವರ ಪೋಷಕರಿಗೂ ಬಹಳ ಒತ್ತಡ ಉಂಟಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಸ್ಥಿತಿಯು ಬಹಳ ಆತಂಕಕಾರಿಯಾಗಿದ್ದು, ಸಮೀಕ್ಷೆಯ ಪ್ರಕಾರ, 50%ರಷ್ಟು ಮಕ್ಕಳು ಅಸ್ವಸ್ಥದ ಕಾರಣಕ್ಕಾಗಿ ಶಾಲೆಗೆ 10 ದಿನಗಳಿಗೂ ಕಡಿಮೆ ರಜೆ ಹಾಕುತ್ತಾರೆ. ಅಲ್ಲದೆ ಶೇ.22ರಷ್ಟು ಮಕ್ಕಳು 10-15 ದಿನಗಳವರೆಗೆ ಶಾಲೆಗೆ ರಜೆ ಹಾಕುತ್ತಾರೆ.

ಆದರೆ ಇಲ್ಲಿ ಪ್ರಮುಖವಾದ ಪ್ರಶ್ನೆಯೆಂದರೆ, ಯಾವ ರೀತಿಯ ಅಸ್ವಸ್ಥಗಳು ಮಕ್ಕಳು ತಮ್ಮ ಬಾಲ್ಯವನ್ನು ಅನುಭವಿಸದಂತೆ ತಡೆಗಟ್ಟುತ್ತದೆ. ಸಮೀಕ್ಷೆಯ ಪ್ರಕಾರ ಕೆಮ್ಮು ಮತ್ತು ನೆಗಡಿಯ ಪಾಲು ಶೇ.70 ಇದ್ದರೆ, ಶೇ.67ರಷ್ಟು ಜ್ವರದ ಪಾಲಿದ್ದು, ಇವು ಬೆಂಗಳೂರಿನ ಅತಿ ಸಾಮಾನ್ಯ ಪಿಡುಗುಗಳಾಗಿದ್ದು , ಶೇ.33ರಷ್ಟು ಮಕ್ಕಳು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದು , ಇದು ಭಾರತದ ಇತರ ನಗರಗಳಿಗಿಂತ ಹೆಚ್ಚಾಗಿದೆ.

ಬೆಂಗಳೂರಿನಂತಹ ಮೆಟ್ರೊಗಳಲ್ಲಿ ಬಹಳಷ್ಟು ಕುಟುಂಬಗಳು ವಿಭಜಿತ ಕುಟುಂಬಗಳಾಗಿದ್ದು , ತಂದೆ-ತಾಯಿ ಇಬ್ಬರೂ ಕೆಲಸದಲ್ಲಿದ್ದು ಶೇ.77ರಷ್ಟು ಪೋಷಕರು ಮಕ್ಕಳ ಮೇಲೆ ಅಲೋಪಥಿ ಅಡ್ಡ ಪರಿಣಾಮಗಳನ್ನು ಬೀರುತ್ತದೆ ಎಂಬ ಆತಂಕ ಹೊಂದಿದ್ದು, ಇದು ಈಗ ಹೆಚ್ಚಾಗುತ್ತಿದೆ.
ರೋಗವನ್ನು ಬುಡದಲ್ಲಿಯೇ ನಾಶಗೊಳಿಸಿ, ಮಕ್ಕಳ ಮೇಲೆ ಅಡ್ಡ ಪರಿಣಾಮಗಳನ್ನು ಬೀರದಂತಹ ಔಷಧಗಳನ್ನು ಯತ್ನಿಸಲು ಈಗ ಅವರು ಸಜ್ಜಾಗುತ್ತಿದ್ದಾರೆ.

ಐಎಂಆರ್‍ಬಿ ಸಂಶೋಧನೆಯ ಪ್ರಕಾರ, ದೀರ್ಘಕಾಲಿಕ ಫಲಿತಾಂಶಗಳಿಗೆ ಹೋಮಿಯೋಪಥಿಯೇ ಅತ್ಯುತ್ತಮ ಚಿಕಿತ್ಸಾ ವಿಧಾನವೆಂದು ಶೇ.74ರಷ್ಟು ಪೋಷಕರು ಅಭಿಪ್ರಾಯಪಡುತ್ತಿದ್ದು, ಅದು ಮಕ್ಕಳಲ್ಲಿ ಪ್ರತಿರೋಧ ಶಕ್ತಿ ಬೆಳೆಸುತ್ತದೆ ಎಂದೂ ಅವರು ನಂಬಿದ್ದಾರೆ. ಅಲ್ಲದೆ ಸಮೀಕ್ಷೆ ಹೇಳುವಂತೆ ಶೇ.91ರಷ್ಟು ಪೋಷಕರು ಹೋಮಿಯೋಪಥಿಯನ್ನು ಬಳಸಲು ಸಿದ್ದರಾಗಿದ್ದು, ಅವರಲ್ಲಿ ಶೇ.53ರಷ್ಟು ಈಗಾಗಲೇ ಅದನ್ನು ಬಳುಸುತ್ತಿದ್ದಾರೆ.

ಸಮೀಕ್ಷೆ ಫಲಿತಾಂಶಗಳ ಕುರಿತು ಪದ್ಮಶ್ರೀ ಪುರಸ್ಕøತರಾದ ಡಾ.ಮುಖೇಶ್ ಬಾತ್ರ ಮಾತನಾಡಿ, ಐಎಂಆರ್‍ಬಿ ಅನಾವರಣಗೊಳಿಸಿದ ಸಮೀಕ್ಷೆ ಆಧಾರದ ಮೇಲೆ,ಬೆಂಗಳೂರಿನ ಮಕ್ಕಳು ಅನುಭವಿಸುತ್ತಿರುವ ಎಲ್ಲಾ ಪಿಡುಗುಗಳಿಗೆ ಕ್ಷೀಣವಾದ ಪ್ರತಿರೋಧವೇ ಕಾರಣವೆಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು. ಡಾ.ಬಾತ್ರಾಸ್ ಅವರು, ನಾವು ಮಕ್ಕಳ ಆರೋಗ್ಯದ ಬಗ್ಗೆ ಗಮನವಹಿಸಿ ಶೇ.96.8ರಷ್ಟು ಪ್ರಕರಣಗಳಲ್ಲಿ ಸಕಾರಾತ್ಮಕ ಚಿಕಿತ್ಸಾ ಫಲಿತಾಂಶಗಳನ್ನು ಪಡೆದಿದ್ದೇವೆ ಎಂದರು.

ಸುಲಭವಾಗಿ ತಡೆಗಟ್ಟಬಲ್ಲ ಮತ್ತು ಗುಣಪಡಿಸಬಲ್ಲ ರೋಗಗಳಿಂದಾಗಿ ದೇಶದ ಭವಿಷ್ಯದ ಮಕ್ಕಳು ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಿರುವುದು ಬಹಳ ವಿಷಾದನೀಯವಾಗಿದೆ. ಆದ್ದರಿಂದ ಮಗುವಿನ ಪ್ರತಿರೋಧ ಶಕ್ತಿಯನ್ನು ಬಲಪಡಿಸುವ ಚಿಕಿತ್ಸೆಗಳನ್ನು ಪೋಷಕರು ಈಗ ಪರಿಗಣಿಸಲು ಸೂಕ್ತ ಸಮಯವಾಗಿದ್ದು, ಇದರಿಂದ ದೇಹದ ಸ್ವಗುಣಕಾರಕ ಸಾಮಥ್ರ್ಯವನ್ನು ಹೆಚ್ಚಿಸಬೇಕು ಎಂದರು.

Facebook Comments

Sri Raghav

Admin