ಬೆಂಗಳೂರಿಗರೇ ಹುಷಾರ್…! ನಿಮ್ಮನ್ನೂ ಕಾಡಬಹುದು ಹವಾಮಾನ ವೈಪರಿತ್ಯ

ಈ ಸುದ್ದಿಯನ್ನು ಶೇರ್ ಮಾಡಿ

 

Bengaluruಬೆಂಗಳೂರು, ಸೆ.29– ಒಂದು ತಿಂಗಳಿನಿಂದ ನಡೆಯುತ್ತಿರುವ ಕಾವೇರಿ ಪ್ರತಿಭಟನೆಯಿಂದ ನಲುಗಿದ್ದ ಸಿಲಿಕಾನ್ ಸಿಟಿಯಲ್ಲಿ ಇದೀಗ ಹವಾಮಾನ ವೈಪರಿತ್ಯ ಉಂಟಾಗಿದೆ. ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಹವಾಮಾನ ವೈಪರಿತ್ಯದಿಂದಾಗಿ ಜನರು ಹಲವು ಖಾಯಿಲೆಗಳಿಂದ ಬಳಲುವಂತಾಗಿದೆ. ಇದಕ್ಕೆ ಕಾವೇರಿ ಕಿಚ್ಚಿನ ಕೊಡುಗೆಯೂ ಅಪಾರವಾಗಿದೆ ಎನ್ನಲಾಗುತ್ತಿದೆ. ನಗರದಲ್ಲಿ ಪ್ರತಿದಿನವೂ ಹವಾಮಾನ ಬದಲಾಗುತ್ತಿದೆ. ಮಳೆ ಮಾಯವಾಗಿದ್ದು, ಬಿಸಿಲಿಲ್ಲದೆ ಮೋಡ ಕವಿದ ವಾತಾವರಣವಿದೆ. ಇದು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದೆ.  ಅದರಲ್ಲೂ ಹಿರಿಯರು ಮತ್ತು ಮಕ್ಕಳಿಗೆ ಚಳಿ, ಜ್ವರ, ಕೆಮ್ಮು, ಶೀತ, ಉಸಿರಾಟದ ತೊಂದರೆ ಇತ್ಯಾದಿ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಯಾವುದೇ ಕ್ಲಿನಿಕ್, ಆಸ್ಪತ್ರೆ ಮುಂದೆ ಹೋದರೂ ಸಾಲುಗಟ್ಟಿ ನಿಂತಿರುವ ರೋಗಿಗಳನ್ನು ಕಾಣಬಹುದಾಗಿದೆ.

ಕಾವೇರಿ ಗಲಭೆಯಿಂದ ಮಾಲಿನ್ಯ:ಕಾವೇರಿ ಕಿಚ್ಚಿಗೆ ರಾಜಧಾನಿ ತಲ್ಲಣಗೊಂಡಿತ್ತು. ಎಲ್ಲೆಡೆ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತ್ತು. ಆದರೆ ಈ ವೇಳೆ ಟೈರ್ ಮತ್ತಿತರ ವಸ್ತುಗಳನ್ನು ಸುಟ್ಟಿದ್ದರಿಂದ ನಗರದಲ್ಲಿ ಉಂಟಾದ ವಾಯುಮಾಲಿನ್ಯ ರೋಗ ಉಲ್ಭಣಗೊಳ್ಳುವಂತೆ ಮಾಡಿದೆ. ಮಕ್ಕಳ ಬಗ್ಗೆ ಎಚ್ಚರ ಅಗತ್ಯ:ಮಕ್ಕಳಲ್ಲಿ ವೈರಲ್ ಫೀವರ್ ಕಾಣಿಸಿಕೊಳ್ಳುತ್ತಿದೆ. ಕೆಮ್ಮ, ಕಫ ಕಾಣಿಸಿಕೊಳ್ಳುವ ಜೊತೆಗೆ ಡೆಂಗ್ಯೂ, ಚಿಕನ್ ಗುನ್ಯಾ ಹೆಚ್ಚಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯವಾಗಿದ್ದು, ಜ್ವರ ಕಾಣಿಸಿಕೊಂಡರೆ ವೈದ್ಯಕೀಯ ತಪಾಸಣೆ ಮಾಡಿಸುವುದು ಸೂಕ್ತವೆಂದು ವೈದ್ಯರು ಸಲಹೆ ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin