ಬೆಂಗಳೂರಿನಲ್ಲಿದೆ ಖತರ್ನಾಕ್ ಲೇಡಿಸ್ ಗ್ಯಾಂಗ್, ಸೆಕ್ಸ್’ಗೆ ಕರೆದು ಲೂಟಿ ಮಾಡ್ತಾರೆ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

Bengaluru-Sex-Workers

ಬೆಂಗಳೂರು, ಏ.4-ಹಾಲಿವುಡ್ ಸಿನಿಮಾಗಳ ದೃಶ್ಯಗಳನ್ನೂ ಮೀರಿಸುವಂಥ ಖತರ್ನಾಕ್ ಲೇಡಿಸ್ ಗ್ಯಾಂಗ್‍ಗಳು ಉದ್ಯಾನನಗರಿ ಬೆಂಗಳೂರಿನಲ್ಲಿ ಸಕ್ರಿಯವಾಗಿವೆ. ರಾತ್ರಿ ವೇಳೆ ಕಾರ್ಯಾಚರಣೆಗೆ ಇಳಿಯುವ ಮಾದಕ ಮೈಮಾಟದ ನಿಶಾ ಸುಂದರಿಯರು ಮಿಕಗಳನ್ನು ಬಲೆಗೆ ಬೀಳಿಸಿಕೊಂಡು ಲಕ್ಷಾಂತರ ರೂಪಾು ನಗದು, ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚುತ್ತಿರುವ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಿಂದ ಸಿಲಿಕಾನ್‍ವ್ಯಾಲಿಯ ಅನೇಕ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಇಂಥ ಪ್ರಕರಣಗಳು ನಡೆದಿದ್ದು, ಸಾರ್ವಜನಿಕರು ಬೆಚ್ಚಿ ಬಿದ್ಧಿದ್ದಾರೆ.

ಕಾರಿನಲ್ಲಿ ಒಬ್ಬಂಟಿಯಾಗಿರುವ ಶ್ರೀಮಂತ ಯುವಕರು ಮತ್ತು ಮಧ್ಯವಯಸ್ಸಿನ ಪುರುಷರೇ ಇವರ ಟಾರ್ಗೆಟ್. ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಮೈಮಾಟ ಪ್ರದರ್ಶಿಸಿ ಕಣ್‍ಸನ್ನೆ ಮೂಲಕ ಕಾರಿನಲ್ಲಿದ್ದವರನ್ನು ಆರ್ಕಸಿ, ಲೈಂಗಿಕ ಕ್ರಿಯೆಗೆ ಆಹ್ವಾನಿಸುತ್ತಾರೆ. ಇವರ ಆಕರ್ಷಣೆಗೆ ಒಳಗಾಗಿ ಎಚ್ಚರ ತಪ್ಪಿದರೆ ಇಂಥ ಪುರುಷರು ತಕ್ಕ ಬೆಲೆ ತೆರೆಬೇಕಾಗುತ್ತದೆ.   ಸಿಗ್ನಲ್‍ನಲ್ಲಿ ಕಾರಿನೊಳಗೆ ಹತ್ತುವ ಈ ಖತರ್ನಾಕ್ ಯುವತಿಯರು, ಯುವಕರ ಮೈಮೇಲೆ ಬಿದ್ದು ತಬ್ಬಿಕೊಂಡು ರಾಸಲೀಲೆಗೆ ಆಹ್ವಾನಿಸಿತ್ತಾರೆ. ಕಾರಿನಲ್ಲಿದ್ದವರು ಇವರ ವರ್ತನೆುಂದ ಕುಪಿತರಾಗಿ ಗದರಿಸಿದರೆ ಕೆಳಗಿಳಿಯುತ್ತಾರೆ. ವ್ಯವಹಾರ ಕುದುರಿಸಲು ಇವರು ಫಲವಾದರೂ ಅಷ್ಟರೊಳಗೆ ಪುರುಷ ಮೈಮೇಲಿದ್ದ ಚಿನ್ನದ ಸರವನ್ನು ಲಪಟಾುಸಿರುತ್ತಾರೆ. ವ್ಯವಹಾರ ಕುದುರಿದರೆ ಕತ್ತಲ ಪ್ರದೇಶಕ್ಕೆ ಕರೆದೊಯ್ದು ಬೆದರಿಸಿ ಹಣ, ಮೊಬೈಲ್ ಮತ್ತು ಚಿನ್ನಾಭರಣಗಳನ್ನು ದೋಚುತ್ತಾರೆ.

ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರದ ದೂರು ನೀಡುವುದಾಗಿ ಬೆದರಿಸಿ ನಗ-ನಾಣ್ಯ ದರೋಡೆ ಮಾಡುವುದು ಇವರು ಅನುಸರಿಸುವ ಸುಲಭ ತಂತ್ರವಾಗಿದೆ.
ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏ.2ರಂದು ರಾತ್ರಿ ಯುವತಿಯರ ಗ್ಯಾಂಗ್ ಯುವಕನೊಬ್ಬನನ್ನು ಸುಲಿಗೆ ಮಾಡಿದೆ. ಇಷ್ಟೆಲ್ಲಾ ನಡೆಯುವುದು ಕೇವಲ ಎರಡು ಮೂರು ನಿುಷಗಳ ಅವಧಿಯಲ್ಲಿ.  ಸಿಗ್ನಲ್‍ನಲ್ಲಿ ಕಾರು ನಿಲ್ಲಿಸಿದ್ದ ಯುವಕನೊಂದಿಗೆ ವ್ಯವಹಾರ ಕುದುರಿಸಿದ ಇಬ್ಬರು ಯುವತಿಯರು ಕತ್ತಲು ಪ್ರದೇಶಕ್ಕೆ ಕರೆದೊಯ್ದು ಹಣ, ಮೊಬೈಲ್ ಮತ್ತು ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಇದು ಮಂಗಳಮುಖಿಯರ ಕೃತ್ಯವೆಂದು ದೂರು ಸ್ವೀಕರಿಸಲು ನಿರಾಕರಿಸಲಾಗಿದೆ.   ಇಂಥ ಪ್ರಕರಣಗಳು, ಇಂದಿರಾನಗರ, ಅಲಸೂರು, ಜೀವನ್‍ಬಿಮಾ ನಗರ ಮತ್ತು ದೊಮ್ಮಲೂರುಗಳಲ್ಲೂ ನಡೆದಿದೆ.   ಹೊಸಕೋಟೆಯಲ್ಲಿ ಮದುವೆಯೊಂದಲ್ಲಿ ಪಾಲ್ಗೊಂಡು ರಾತ್ರಿ ನಗರಕ್ಕೆ ಹಿಂದಿರುಗುತ್ತಿದ್ದ  ಗೌಡ ಎಂಬುವರು ಸುಲಿಗೆಗೆ ಒಳಗಾಗಿದ್ದಾರೆ. ಸಂಚಾರಿ ಸಿಗ್ನಲ್‍ನಲ್ಲಿ ಉದ್ಯು ಗೌಡ ಅವರತ್ತ ಕಿರುನಗೆ ಬೀರಿದ ಯುವತಿಯೊಬ್ಬಳು ಅಶ್ಲೀಲ ರೀತಿಯಲ್ಲಿ ಅಂಗಾಂಗ ಪ್ರದರ್ಶಿಸಿ ರಾಸಲೀಲೆಗೆ ಕರೆದಳು. ಆಕೆಯತ್ತ ನೋಡುತ್ತಿರುವಾಗಲೇ ಮತ್ತೊಬ್ಬ ಯುವತಿ ಕಾರಿನೊಳಗೆ ನುಸುಳಿದ್ದಳು. ಅಷ್ಟರಲ್ಲಿ ಸಿಗ್ನಲ್ ಕ್ಲಿಯರ್ ಆದಾಗ ಕಾರನ್ನು ಮುಂದಿನ ರಸ್ತೆಗೆ ಚಾಲನೆ ಮಾಡಿದರು. ಕಾರಿನಲ್ಲಿದ್ದ ಯುವತಿ ಗೌಡ ಅವರನ್ನು ತಬ್ಬಿಕೊಂಡು, ಚುಂಬಿಸುವಂತೆ ಆಹ್ವಾನಿಸಿದಳು. ಇದರಿಂದ ಕುಪಿತರಾದ ಅವರು ದೊಮ್ಮಲೂರಿನ ಐದನೇ ಮುಖ್ಯರಸ್ತೆಯಲ್ಲಿ ಕಾರಿನಿಂದ ಇಳಿಯುವಂತೆ ಆಕೆಗೆ ಗದರಿಸಿದರು. ಆಕೆ ಇಳಿದ ಹೋದ ನಂತರ ಮನೆಗೆ ಧಾಸಿದ ಗೌಡ ತಮ್ಮ ಪತ್ನಿ ಬಳಿ ನಡೆದ ವೃತ್ತಾಂತವನ್ನು ಹೇಳಿದರು. ನಂತರ ಅವರ ಮೈಮೇಲಿದ್ದ 50 ಗ್ರಾಂ ಚಿನ್ನದ ಸರ ನಾಪತ್ತೆಯಾಗಿರುವುದು ಕಂಡುಬಂದಿತು.

ಇದು ಗೌಡರ ಪ್ರಕರಣ ಮಾತ್ರವಲ್ಲ. ಚಾಲಾಕಿ ಮಳಾ ಗ್ಯಾಂಗ್‍ಗಳ ಸುಲಿಗೆ ಕೃತ್ಯಗಳ ಬಗ್ಗೆ ಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿದೆ.
ಕೇಂದ್ರ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) ನಿವೃತ್ತ ಅಧಿಕಾರಿಯೊಬ್ಬರೂ ಕೂಡ ಖತರ್ನಾಕ್ ಲೇಡಿ ಗ್ಯಾಂಗ್ ಬಲೆಗೆ ಬಿದ್ದು ನಗ-ನಾಣ್ಯ ಕಳೆದುಕೊಂಡಿದ್ದಾರೆ.   ಈ ರೀತಿಯ ಪ್ರಕರಣಗಳು ಸಾಕಷ್ಟು ನಡೆಸಿದ್ದರೂ, ಬೆಳಕಿಗೆ ಬರುತ್ತಿರುವುದು ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ. ಲೇಡಿಸ್ ಗ್ಯಾಂಗ್‍ನಿಂದ ಸುಲಿಗೆಗೆ ಒಳಗಾದ ಅನೇಕರು ಮಾನ-ಮಾರ್ಯಾದೆ ಹೆದರಿ ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಿಲ್ಲ.

ಬೆಂಗಳೂರಿನ ಪೂರ್ವ ವಲಯ ಪೊಲೀಸರು ಸಿಸಿಟಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ಈ ಪ್ರಕರಣಗಳ ಸಂಬಂಧ ಕೆಲವರನ್ನು ಬಂಧಿಸಿದ್ದರೂ, ಧೆಡೆ ಮಳಾ ಗ್ಯಾಂಗ್‍ಗಳ ಉಪಟಳ ಮುಂದುವರಿದಿದೆ. ಒಮ್ಮೆ ಒಂದು ಸ್ಥಳದಲ್ಲಿ ಕೃತ್ಯ ಎಸಗುವ ಇವರ ನಂತರ ಬೇರೆ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ರಾಷ್ಟ್ರೀಯ  ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮಳೆಯರ ಮೂಲಕ ವಾಹನ ಚಾಲಕರನ್ನು ಆರ್ಕಸಿ ದರೋಡೆ ಮಾಡುತ್ತಿರುವ ಗ್ಯಾಂಗ್ ಒಂದೆಡೆಯಾದರೆ, ನಗರದಲ್ಲಿ ರಾತ್ರಿ ವೇಳೆ ಏಕಾಂಗಿ ಕಾರು ಚಾಲಕರನ್ನು ಸುಲಿಗೆ ಮಾಡುತ್ತಿರುವ ಇವರನ್ನು ಬಂಧಿಸಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin