ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ತಪಾಸಣೆ

ಈ ಸುದ್ದಿಯನ್ನು ಶೇರ್ ಮಾಡಿ

Kottanuru--01

ಬೆಂಗಳೂರು, ನ.18- ವೀಸಾ ಹಾಗೂ ಪಾಸ್‍ಪೋರ್ಟ್ ಅವಧಿ ಮುಗಿದರೂ ನಗರದಲ್ಲಿ ನೆಲೆಸಿರುವ ವಿದೇಶಿಗರ ತಪಾಸಣೆ ನಡೆಸಲಾಯಿತು. ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ಮಾರ್ಗದರ್ಶನದಲ್ಲಿ ಈ ತಪಾಸಣೆ ಕೈಗೊಳ್ಳಲಾಯಿತು. ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ಉಪವಿಭಾಗದ ಸಂಪಿಗೆಹಳ್ಳಿಯಲ್ಲಿ ನೆಲೆಸಿರುವ ಸುಮಾರು ನೂರು ವಿದೇಶಿಗರ ಮನೆಗಳಿಗೆ ಭೇಟಿ ನೀಡಿದ ಪೊಲೀಸರು ಅವರ ವೀಸಾ ಹಾಗೂ ಪಾಸ್‍ಪೋರ್ಟ್ ಅವಧಿಯ ವಿವರಗಳನ್ನು ಪರಿಶೀಲಿಸಿದರು.

ಉದ್ಯೋಗ ವೀಸಾ, ಶಿಕ್ಷಣದ ವೀಸಾ ಹಾಗೂ ಇನ್ನಿತರ ಕಾರಣಕ್ಕೆ ವೀಸಾ, ಪಾಸ್‍ಪೋರ್ಟ್ ಪಡೆದು ಬೆಂಗಳೂರಿಗೆ ಬಂದು ನೆಲೆಸಿರುವ ವಿದೇಶಿಗರು ಪಾಸ್‍ಪೋರ್ಟ್ ಅವಧಿ ಮುಗಿದಿದ್ದರೂ ಇಲ್ಲೇ ನೆಲೆಯೂರಿದ್ದಾರೆಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಕೊತ್ತನೂರು ವ್ಯಾಪ್ತಿಯಲ್ಲಿ ತಪಾಸಣೆ ನಡೆಸಲಾಯಿತು.

Facebook Comments

Sri Raghav

Admin