ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ಜೋರು

ಈ ಸುದ್ದಿಯನ್ನು ಶೇರ್ ಮಾಡಿ

electranics

ಬೆಂಗಳೂರು, ಸೆ.23– ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆ ಗ್ರಾಹಕರ ಖರೀದಿ ಪ್ರವೃತ್ತಿ ಕುರಿತಂತೆ ಆಳವಾದ ಸಂಶೋಧನೆ ಹಾಗೂ ನಿಕಟ ನಿಗಾ ವಹಿಸಿ, ಆನ್‍ಲೈನ್ ಖರೀದಿಯಲ್ಲಿ ಯಾವ ರೀತಿಯ ಷಾಪ್ಪಿಂಗ್ ಪ್ರವೃತ್ತಿಯಿದೆ ಎಂದು ಅಧ್ಯಯನ ಕೈಗೊಳ್ಳಲಾಗಿದೆ. ಈ ವರದಿಯ ಪ್ರಕಾರ ಬೆಂಗಳೂರಿನ ಗ್ರಾಹಕರು ಈ ಹಬ್ಬದ ಮಾಸದಲ್ಲಿ ಗೃಹ ಜೀವನಶೈಲಿ, ಆಡಿಯೋ ಗೃಹ ಮನರಂಜನೆ, ವಾಚುಗಳು ಮತ್ತು ಬಟ್ಟೆ ಹಾಗೂ ಇತರೆ ಪರಿಕರಗಳ ಖರೀದಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಭಾರತದ ಮಾಹಿತಿ ತಂತ್ರಜ್ಞಾನದ ಕೇಂದ್ರ ಸ್ಥಾನವೆಂದೇ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಗ್ರಾಹಕರು ಕ್ಯಾಮೆರಾ ಆಪ್ಟಿಕ್‍ಗಳ ಹೆಚ್ಚಿನ ಹುಡುಕಾಟದಲ್ಲಿದ್ದಾರೆ. ಜೊತೆಗೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುವ ಇತರೆ ಉತ್ಪನ್ನಗಳೆಂದರೆ ಮೊಬೈಲ್ ಫೋನ್‍ಗಳು, ಲ್ಯಾಪ್‍ಟಾಪ್‍ಗಳು ಹಾಗೂ ಟ್ಯಾಬ್ಲೆಟ್‍ಗಳಂತಹ ಇತರೆ ಎಲೆಕ್ಟ್ರಾನಿಕ್ ವಸ್ತುಗಳು.

ಒಟ್ಟು 5.6 ದಶಲಕ್ಷ ಗ್ರಾಹಕರ ಪೈಕಿ 18% ಖರೀದಿದಾರರು ಬೆಂಗಳೂರು ನಗರದ ಹೊರಗಿನವರಾಗಿದ್ದಾರೆ. ಇಬೇ ಇಂಡಿಯಾದ ದತ್ತಾಂಶಗಳ ಪ್ರಕಾರ ಬೆಂಗಳೂರು ನಗರ ಭಾರತದ 10 ಪ್ರಮುಖ ಇ-ವಾಣಿಜ್ಯ ನಗರಗಳ ಪೈಕಿ ಗುರುತಿಸಿಕೊಂಡಿದೆ ಹಾಗೂ 2ನೇ ಸ್ಥಾನದಲ್ಲಿದೆ.

ಈ ಪ್ರಾಂತ್ಯದಲ್ಲಿ ಗಮನಿಸಲಾಗಿರುವಂತಹ ಷಾಪ್ಪಿಂಗ್ ಪ್ರವೃತ್ತಿ ಈ ಕೆಳಗಿನಂತಿದೆ:  ಕ್ಯಾಮೆರಾಗಳು ಆಪ್ಟಿಕ್‍ಗಳು, ಗೃಹ ಜೀವನಶೈಲಿ, ಆಡಿಯೋ ಗೃಹ ಮನರಂಜನೆ, ವಾಚುಗಳು, ಬಟ್ಟೆ ಪರಿಕರಗಳು. ಇಬೇ ಇಂಡಿಯಾ ಭಾರತದ ಪ್ರಮುಖ ಹಾಗೂ ಪ್ರತಿಷ್ಠಿತ ಆನ್‍ಲೈನ್ ಮಾರುಕಟ್ಟೆ ತಾಣ ಹಾಗೂ ಷಾಪ್ಪಿಂಗ್ ತಾಣವಾಗಿದೆ. ಈ ಮಾರಾಟದ ವೆಬ್ ಪೋರ್ಟ್‍ಲ್‍ನಲ್ಲಿ ಎಲೆಕ್ಟ್ರಾನಿಕ್ಸ್, ಜೀವನಸೈಲಿ, ಕಲೆಕ್ಟಿಬಲ್ಸ್ ಹಾಗೂ ಮಾಧ್ಯಮ ವರ್ಗಗಳಡಿಯಲ್ಲಿ 10 ಕೋಟಿಗೂ ಹೆಚ್ಚಿನ ಸಂಖ್ಯೆಯ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿದೆ.

► Follow us on –  Facebook / Twitter  / Google+

Facebook Comments

Sri Raghav

Admin