ಬೆಂಗಳೂರಿನಲ್ಲಿ ಕೇಳೋರಿಲ್ಲ ಸ್ಲಂ ವಾಸಿಗಳ ಗೋಳು

ಈ ಸುದ್ದಿಯನ್ನು ಶೇರ್ ಮಾಡಿ

eeeeeeeeeeeeeಬೆಂಗಳೂರು, ಆ.3-ಸ್ಲಂಗಳಲ್ಲಿ ವಾಸಿಸುವ ಜನರ ಜೀವನಕ್ಕೆ ಬೆಲೆಯೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೆಲವು ಭೂಗಳ್ಳರು ಕೆರೆ ಒತ್ತುವರಿ ಮಾಡಿಕೊಳ್ಳುವ ಉದ್ದೇಶದಿಂದ ಸುಬ್ರಹ್ಮಣ್ಯ ಪುರ ಕೆರೆ ಕೋಡಿ ಒಡೆದು ಹಾಕಿರುವುದರಿಂದ ಕೆರೆ ನೀರೆಲ್ಲಾ  ಪಕ್ಕದ ಕೊಳಚೆ ಪ್ರದೇಶಕ್ಕೆ ನುಗ್ಗಿದ ಪರಿಣಾಮ  ಅಲ್ಲಿನ ನಿವಾಸಿಗಳು ಮೂರ‍್ನಾಲ್ಕು ದಿನಗಳಿಂದ ವನವಾಸ ಪಡುವಂತಾಗಿದೆ. ಬಫರ್‌ಝೋನ್‌ನೊಳಗೆ ಯಾವುದೇ ಕಟ್ಟಡ ನಿರ್ಮಿಸಬಾರದು ಎಂಬ ಕಾನೂನಿದೆ. ಆದರೆ ಈ ಕಾನೂನಿಗೆ ಬೆಂಗಳೂರಿನಲ್ಲಿ ಯಾವುದೇ ಬೆಲೆ ಇಲ್ಲ. ಕೆರೆ ಒತ್ತುವರಿ ಮುಂದುವರೆದಿದ್ದರೂ ಸಂಬಂಧಪಟ್ಟ ಅಕಾರಿಗಳು ಮಾತ್ರ ಈ ಬಗ್ಗೆ ಚಕಾರವೆತ್ತುತ್ತಿಲ್ಲ.

 ಸುಬ್ರಹ್ಮಣ್ಯಪುರದಲ್ಲೂ ಆಗಿರುವುದು ಇದೇ. ಕೆರೆಯ ಸುತ್ತಮುತ್ತ ಹಲವಾರು ಕಟ್ಟಡಗಳು ತಲೆ ಎತ್ತಿವೆ. ಇದೀಗ ಕೆರೆ ನೀರು ಖಾಲಿ ಮಾಡಿಸಿದರೆ ಮತ್ತಷ್ಟು ಜಾಗ ಒತ್ತುವರಿ ಮಾಡಿಕೊಳ್ಳಬಹುದು ಎಂಬುದು ಭೂಗಳ್ಳರ ಆಸೆ.  ಹೀಗಾಗಿಯೇ ತುಂಬಿ ತುಳುಕುತ್ತಿರುವ ಕೆರೆಯ ಕೋಡಿಯನ್ನು ಒಡೆದು ಹಾಕಿದ್ದಾರೆ. ಇದರಿಂದ ಕೆರೆ ನೀರು ಪಕ್ಕದ ಕೊಳಚೆ ಪ್ರದೇಶಕ್ಕೆ ನುಗ್ಗುತ್ತಿದೆ. ಇದರೊಂದಿಗೆ 55 ಅಡಿ ಅಗಲವಿರಬೇಕಾದ ರಾಜಕಾಲುವೆಯನ್ನು ಬಿಬಿಎಂಪಿ ಅಕಾರಿಗಳು ಕಿರಿದಾಗಿಸಿರುವುದು ಮತ್ತೊಂದು ಕಾರಣವಾಗಿದೆ.

ಈ ಕುರಿತಂತೆ ಸ್ಥಳೀಯರು ಬಿಬಿಎಂಪಿ ಆಯುಕ್ತ ಮಂಜುನಾಥಪ್ರಸಾದ್ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇತ್ತ ಬೆಂಗಳೂರಿನಲ್ಲಿ ಉಂಟಾಗುವ ಮಳೆ ನೀರಿನ ಅನಾಹುತ ಸಮಸ್ಯೆ ಬಗೆಹರಿಸುವ ಕುರಿತಂತೆ  ಮಗನನ್ನು ಕಳೆದುಕೊಂಡು ಮೂರು ದಿನ ಕಳೆದಿಲ್ಲ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕಾರಿಗಳ ಸಭೆ ಕರೆದು ಚರ್ಚಿಸುತ್ತಿದ್ದಾರೆ. ಆದರೆ ಕೆರೆ ಕೋಡಿ  ಒಡೆದು ಹಾಕಲಾಗಿದೆ. ಇದರಿಂದ ನಮ್ಮ ಮನೆ-ಮಠ ಜಲಮಯವಾಗಿದೆ. ನ್ಯಾಯ ದೊರಕಿಸಿಕೊಡಿ ಎಂದು ಸ್ಥಳೀಯರು ಅಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.  ಈ ಕುರಿತಂತೆ ಬಿಎಂಟಿಎಫ್, ಮಾಲಿನ್ಯ ನಿಯಂತ್ರಣ ಮಂಡಳಿ, ಕೆರೆ ಪ್ರಾಕಾರದ ಮುಖ್ಯಸ್ಥರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಮ್ಮ ಕಷ್ಟ ಯಾರಿಗೆ ಹೇಳಿಕೊಳ್ಳಬೇಕು ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ. ಸಂಬಂಧಪಟ್ಟ ಅಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಆಗಿರುವ ಅನಾಹುತಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಜನಾಕ್ರೋಶಕ್ಕೆ ಗುರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

► Follow us on –  Facebook / Twitter  / Google+

 ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin