ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಅಪಾಯಕಾರಿ ಕ್ಯಾನ್ಸರ್

ಈ ಸುದ್ದಿಯನ್ನು ಶೇರ್ ಮಾಡಿ

Cancer-Cell--021

ಬೆಂಗಳೂರು, ಫೆ.3-ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಅಂಗವಾಗಿ ತಡೆಗಟ್ಟುವ ಆರೋಗ್ಯರಕ್ಷಣೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಇಂಡಸ್ ಹೆಲ್ತ್ ಪ್ಲಸ್, ಜನರಿಗೆ ಕ್ಯಾನ್ಸರ್ ಖಾಯಿಲೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅಬ್ನಾರ್ಮಾಲಿಟಿ ವರದಿಯೊಂದನ್ನು ಬಿಡುಗಡೆ ಮಾಡಿದೆ.  ಈ ವರದಿಗಾಗಿ ಕೈಗೊಳ್ಳಲಾದ ಸಮೀಕ್ಷೆಯಲ್ಲಿ ಬೆಂಗಳೂರಿನಲ್ಲಿ 2016ರ ಜನವರಿಯಿಂದ ಡಿಸೆಂಬರ್ ನಡುವೆ ಒಟ್ಟು 12,250 ಜನರು (ಪುರುಷರು 6,394, ಮಹಿಳೆಯರು 5,856) ತಡೆಗಟ್ಟುವ ಆರೋಗ್ಯ ತಪಾಸಣೆಗೆ ಒಳಗಾದರು.

55-65 ವರ್ಷ ವಯೋಮಾನದವರಲ್ಲಿ ಕ್ಯಾನ್ಸರ್‍ನ ಅಪಾಯ ಅತೀ ಹೆಚ್ಚಾಗಿರುವುದು ಈ ವರದಿಯಿಂದ ತಿಳಿದು ಬಂದಿದೆ; ಇದರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಮುಖವಾಗಿದ್ದರೆ, ತಲೆ ಕುತ್ತಿಗೆ ಕ್ಯಾನ್ಸರ್ ಹಾಗೂ ಇಸೊಫೇಜಲ್ ಮೂರನೆಯ ಸ್ಥಾನದಲ್ಲಿದೆ. ಮಹಿಳೆಯರಲ್ಲಿ, 45-65 ವರ್ಷ ವಯೋಮಾನದವರಲ್ಲಿ ಸ್ತನ ಕ್ಯಾನ್ಸರ್ ಸಂಭವದ ಪ್ರಮಾಣ ಅತಿ ಹೆಚ್ಚಾಗಿದ್ದರೆ, ಗಳಕಂಠದ ಕ್ಯಾನ್ಸರ್ ಎರಡನೆಯ ಸ್ಥಾನದಲ್ಲಿದೆ.   ಈ ಸಂದರ್ಭದಲ್ಲಿ ಮಾತನಾಡಿದ ಇಂಡಸ್ ಹೆಲ್ತ್ ಪ್ಲಸ್‍ನ ತಡೆಗಟ್ಟುವ ಆರೋಗ್ಯರಕ್ಷಣೆ ವಿಭಾಗದ ತಜ್ಞ ಹಾಗೂ ಜೆಎಂಡಿ ಅಮೊಲ್ ನಾಯಕ್‍ವಾಡಿ ಮಾತನಾಡಿ, ಬೆಂಗಳೂರು ನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ವಾಹನಗಳು ಹಾಗೂ ಕೈಗಾರಿಕೆಗಳಿಂದ ಹೊರಹೊಮ್ಮುತ್ತಿರುವ ಹೊಗೆಯ ಮಾಲಿನ್ಯ ಶ್ವಾಸಕೋಶದ ಕ್ಯಾನ್ಸರ್ ಸಾಧ್ಯತೆಯನ್ನು ಶೇ.5-6ರಷ್ಟು ಹೆಚ್ಚಿಸಿದೆ. ಇದುವರೆಗೂ ಈ ಪ್ರಮಾಣ ತಂಬಾಕು ಬಳಕೆದಾರರಲ್ಲಿ ಸಾಧಾರಣವಾಗಿ ಕಂಡು ಬರುತ್ತಿತ್ತು. 30-50 ವರ್ಷ ವಯೋಮಾನದ ಗುಂಪಿನ ಪುರುಷರು ಹಾಗೂ ಮಹಿಳೆಯರಲ್ಲಿ ಈ ಸಾಧ್ಯತೆ ಹೆಚ್ಚು. ಏಕೆಂದರೆ ಈ ವಯೋಮಾನದ ಬಹುಪಾಲು ಜನಸಂಖ್ಯೆ ದುಡಿಯುವ ವರ್ಗದವರಾಗಿದ್ದಾರೆ ಎಂದರು.

ವರದಿಯ ಮುಖ್ಯಾಂಶಗಳು:

ಬೆಂಗಳೂರಿನಲ್ಲಿ ಕೆಂಪು ಮೆಣಸಿನಕಾಯಿಯ ಅಧಿಕ ಬಳಕೆ, ಅತೀ ಹೆಚ್ಚಿನ ತಾಪಮಾನದಲ್ಲಿ ಆಹಾರ ಹಾಗೂ ಮದ್ಯಪಾನ ಸೇವನೆಗಳು ಹೊಟ್ಟೆಯ ಕ್ಯಾನ್ಸರ್ ಉಂಟು ಮಾಡುವಂತಹ ಪ್ರಮುಖ ಕಾರಣಗಳಾಗಿವೆ.  ಈ ನಗರದಲ್ಲಿ, ಕ್ಯಾನ್ಸರ್ ಬರಲು ಪ್ರಮುಖ ಕಾರಣಗಳೆಂದರೆ ಬದಲಾಗುತ್ತಿರುವ ಜೀವನಶೈಲಿ ಹಾಗೂ ಅನುವಂಶಿಕ ಪ್ರಾಬಲ್ಯ. ಕೆಲಸದ ಒತ್ತಡ, ಒತ್ತಡ, ಅನಾರೋಗ್ಯಕರ ಆಹಾರ ಸೇವನೆ ಪದ್ಧತಿಗಳು ಹಾಗೂ ಅತಿಯಾದ ಧೂಮಪಾನ ಕ್ಯಾನ್ಸರ್‍ನ ಸಂಭವವನ್ನು ಮತ್ತಷ್ಟು ಹೆಚ್ಚಿಸಿವೆ.

ಕುಳಿತಲ್ಲೇ ಮಾಡುವ ಕೆಲಸದಲ್ಲಿರುವ ಪುರುಷರ ವರ್ಗದವರ ಪೈಕಿ 25-45 ವರ್ಷ ವಯೋಮಾನದವರು ಹೆಚ್ಚು ಮಸಾಲೆ ಪದಾರ್ಥಗಳ ಸೇವನೆ ಹಾಗೂ ಮದ್ಯಪಾನ ಮಾಡುವ ಹವ್ಯಾಸಗಳನ್ನು ಬೆಳೆಸಿಕೊಂಡಿರುವುದು ಹೊಟ್ಟೆಯ ಕ್ಯಾನ್ಸರ್‍ನ ಅಪಾಯವನ್ನು ಹೆಚ್ಚಿಸುತ್ತಿದೆ.  ಈ ವಿಷಯಕ್ಕೆ ಸಂಬಂಧಿಸಿದಂತೆ ಇಂಡಸ್ ಹೆಲ್ತ್ ಪ್ಲಸ್ ಭಾರತದಾದ್ಯಂತ ಕೈಗೆಟಕುವ ದರಗಳಲ್ಲಿ ಅತ್ಯುತ್ಕøಷ್ಟ ಗುಣಮಟ್ಟದ ತಡೆಗಟ್ಟುವ ಆರೋಗ್ಯ ತಪಾಸಣೆಗಳನ್ನು ಒದಗಿಸುತ್ತಿದೆ. 2000ನೇ ಇಸವಿಯಲ್ಲಿ ಸ್ಥಾಪನೆಯಾದ ಇಂಡಸ್, ತನ್ನ ಗ್ರಾಹಕರಿಗಾಗಿ ತನ್ನ ಎಲ್ಲಾ ಕೇಂದ್ರಗಳಲ್ಲಿಯೂ ಅತ್ಯಾದುನಿಕ ತಂತ್ರಜ್ಞಾನವುಳ್ಳ ಸೌಲಭ್ಯಗಳನ್ನು ಬಳಸುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin