ಬೆಂಗಳೂರಿನಲ್ಲಿ ನಾಲ್ಕು ಕಡೆ ಸರಗಳ್ಳತನ

ಈ ಸುದ್ದಿಯನ್ನು ಶೇರ್ ಮಾಡಿ

Chain-Snatchers

ಬೆಂಗಳೂರು, ಆ.9- ನಗರದಲ್ಲಿ ನಾಲ್ಕು ಕಡೆ ಸರ ಅಪಹರಣ ನಡೆದಿದ್ದು, ಮಹಿಳೆಯರು ತಮ್ಮ ಸರವನ್ನು ರಕ್ಷಿಸಿಕೊಳ್ಳುವುದೇ ಕಷ್ಟಸಾಧ್ಯವಾಗಿದೆ.
ಆರ್‍ಆರ್ ನಗರ:
ಇಂದು ಬೆಳಗಿನ ಜಾವ ಮನೆ ಸಮೀಪವೇ ಇದ್ದ ಯೋಗ ಶಾಲೆಗೆ ಹೋಗುತ್ತಿದ್ದ ಮಹಿಳೆಯನ್ನು ಬೈಕ್‍ನಲ್ಲಿ ಹಿಂಬಾಲಿಸಿದ ಇಬ್ಬರು ಸರಗಳ್ಳರು 70 ಗ್ರಾಂ ಸರ ಎಳೆದುಕೊಂಡು ಪರಾರಿಯಾಗಿದ್ದಾರೆ.  ರಾಘವೇಂದ್ರ ಮಠ ಸಮೀಪದ ನಿವಾಸಿ ಶಾಕುಂತಲಾ ರಾಮಣ್ಣ ಎಂಬುವರು ಇಂದು ಬೆಳಗಿನ ಜಾವ 6.15ರಲ್ಲಿ ಮನೆ ಸಮೀಪವೇ ಇದ್ದ ಯೋಗ ಶಾಲೆಗೆ ನಡೆದು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಸರಗಳ್ಳರು ತಮ್ಮ ಅಟ್ಟಹಾಸ ಮೆರೆದು ಪರಾರಿಯಾಗಿದ್ದಾರೆ.
ಚಂದ್ರಾ ಲೇಔಟ್:
ಗಾರ್ಮೆಂಟ್ಸ್ ಉದ್ಯೋಗಿಯೊಬ್ಬರು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಬೈಕ್‍ನಲ್ಲಿ ಹಿಂಬಾಲಿಸಿದ ಸರಗಳ್ಳರು 20 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ. ಮಾನಸ ನಗರ ನಿವಾಸಿ ಗೌರಮ್ಮ (45) ಎಂಬುವರು ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದು, ರಾತ್ರಿ 8 ಗಂಟೆಯಲ್ಲಿ ಮನೆಗೆ ಹೋಗುತ್ತಿದ್ದಾಗ ಮನೆಗೆ ಸ್ವಲ್ಪ ದೂರವಿದ್ದಂತೆ ಬೈಕ್‍ನಲ್ಲಿ ಹಿಂಬಾಲಿಸಿ ಬಂದ ಸರಗಳ್ಳರು ಸರ ಎಗರಿಸಿದ್ದಾರೆ.

ಆರ್‍ಎಂಸಿ ಯಾರ್ಡ್:
ಬಸ್ ಇಳಿದು ರಾತ್ರಿ 9.15ರಲ್ಲಿ ಮನೆಗೆ ನಡೆದು ಹೋಗುತ್ತಿದ್ದ ರಾಘವೇಂದ್ರ ಲೇಔಟ್ ನಿವಾಸಿ ಜಯಲಕ್ಷ್ಮಮ್ಮ ಎಂಬುವರನ್ನು ಬೈಕ್‍ನಲ್ಲಿ ಹಿಂಬಾಲಿಸಿದ ಕಳ್ಳರು ಇವರ ಕೊರಳಿಗೆ ಕೈ ಹಾಕಿ 55 ಗ್ರಾಂ ಸರ ಎಗರಿಸಿದ್ದಾರೆ.

ಆರ್‍ಟಿ ನಗರ:
ಶಾಲೆಯಿಂದ ಮಗುವನ್ನು ಕರೆದುಕೊಂಡು ಮನೆ ಬಳಿ ಬರುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಬೈಕ್‍ನಲ್ಲಿ ಬಂದ ಇಬ್ಬರು ಕಳ್ಳರು ಇವರ ಕೊರಳಲ್ಲಿದ್ದ 45 ಗ್ರಾಂ ಸರ ಎಗರಿಸಿದ್ದಾರೆ. ಗಿಡ್ಡಪ್ಪ ಬ್ಲಾಕ್ ನಿವಾಸಿ ಸವಿತಾ ಎಂಬುವರು ನಿನ್ನೆ ಮಧ್ಯಾಹ್ನ 3 ಗಂಟೆಯಲ್ಲಿ ಶಾಲೆಯಿಂದ ಮಗುವನ್ನು ಕರೆದುಕೊಂಡು ಮನೆ ಬಳಿ ಬರುತ್ತಿದ್ದಂತೆ ಸರಗಳ್ಳರು ಸರ ಎಗರಿಸಿ ಪರಾರಿಯಾಗಿದ್ದಾರೆ.  ಈ ನಾಲ್ಕೂ ಪ್ರಕರಣಗಳನ್ನು ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡು ಸರಗಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin