ಬೆಂಗಳೂರಿನಲ್ಲಿ ಮತ್ತೊಂದು ಹುಕ್ಕಾ ಬಾರ್ ಮೇಲೆ ಸಿಸಿಬಿ  ದಾಳಿ : ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

arrested

ಬೆಂಗಳೂರು, ಜ.24- ನಗರದಲ್ಲಿ ಅನಧಿಕೃತವಾಗಿ ಹುಕ್ಕಾ ಬಾರ್ ತೆರೆಯಲಾಗಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಮೂರು ಕಡೆ ದಾಳಿ ನಡೆಸಿ 15 ಮಂದಿಯನ್ನು ಬಂಧಿಸಿದ್ದ ಬೆನ್ನಲ್ಲೇ ಇದೀಗ ಮತ್ತೊಂದು ಬಾರ್ ಮೇಲೆ ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ರಘುನಾಥನ್(36), ಮಣಿಪುರದ ತಾಂಗಿಸೆಹಾ ಕಾಂಗ್ ತಾಂಗ್(31) ಮತ್ತು ಪಿಲಾನ್ (22) ಎಂಬು ವರನ್ನು ಬಂಸಲಾಗಿದೆ.  ಕಬ್ಬನ್‍ಪಾರ್ಕ್ ಠಾಣೆ ಸರಹದ್ದಿನ ಚರ್ಚ್‍ಸ್ಟ್ರೀಟ್ ರಸ್ತೆಯಲ್ಲಿ ಅನಕೃತವಾಗಿ ತಲೆ ಎತ್ತಿದ್ದ ಥಾಲಾಸಾ ಎಂಬ ಹುಕ್ಕಾಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಈ ಮೂವರನ್ನು ಬಂಧಿಸಿದ್ದಾರೆ.

ಹುಕ್ಕಾ ಸೇದಲು ನೀಡಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಸಂದರ್ಭದಲ್ಲಿ 13 ಮಂದಿ ಗ್ರಾಹಕರು ಬಾರ್‍ನಲ್ಲಿ ಇದ್ದದ್ದು ಕಂಡು ಬಂದಿದೆ. ಕೇಂದ್ರ ಅಪರಾಧ ವಿಭಾಗದ ಎಸಿಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಶಿವರಾಜು ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin