ಬೆಂಗಳೂರಿನಲ್ಲಿ 84 ನೇ ವಾಯುಪಡೆ ವಾರ್ಷಿಕೋತ್ಸವ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

Airorce

ಬೆಂಗಳೂರು. ಅ.08  :  ಗಗನ ರಕ್ಷಕನೆನಿಸಿರುವ ಭಾರತೀಯ ವಾಯುಪಡೆಯ 84ನೆ ವಾರ್ಷಿಕೋತ್ಸವವನ್ನು ನಗರದಲ್ಲೂ ಆಚರಿಸಲಾಯಿತು. ವಾಯುಪಡೆಯ ತರಬೇತಿ ಕಮಾಂಡ್‍ನ ಆವರಣದಲ್ಲಿ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ಏರ್ ಮಾರ್ಷಲ್ ಎಸ್.ಆರ್.ಕೆ.ನಾಯರ್ ಯುದ್ಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ದೇಶಸೇವೆಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಮರ್ಪಿಸಿದರು. ಹುತಾತ್ಮರ ಗೌರವಾರ್ಥ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಎರಡು ನಿಮಿಷಗಳ ಮËನಾಚರಣೆ ಮಾಡಿದರು. ವಾಯುಪಡೆ ದಿನಾಚರಣೆಯ ಅಂಗವಾಗಿ ಒಂದು ವಾರ ಪೂರ್ತಿ ವಿವಿಧ ಅಧಿಕೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ದೇಶದ ವಾಯು ಪ್ರದೇಶದ ರಕ್ಷಣೆ ಹಾಗೂ ಯಾವುದೇ ಸಂಘರ್ಷದ ಸಂದರ್ಭದಲ್ಲಿ ವೈಮಾನಿಕ ಕಾರ್ಯಾಚರಣೆ ನಡೆಸುವ ಉದ್ದೇಶದಿಂದ 1932ರಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಭಾರತೀಯ ವಾಯುಪಡೆ ಇಂದು ಜಗತ್ತಿನಲ್ಲೇ ನಾಲ್ಕನೆ ಅತಿ ದೊಡ್ಡ ವಾಯುಪಡೆಯಾಗಿ ಬೆಳೆದುನಿಂತಿದೆ.  ಹಿಂದಿನ ವಾಂಪೈರ್, ತೂಫಾನಿ, ಸ್ವಿಫ್ಟ್‍ಫೈರ್‍ಗಳ ಕಾಲದಿಂದ ಅತ್ಯಾಧುನಿಕ ಸುಖೋಯಿ-30, ಮಿರಾಜ್, ಸಿ-130 ಹಾಗೂ ಸಿ-17 ಯುದ್ಧ ವಿಮಾನಗಳವರೆಗೆ ವಾಯುಪಡೆ ಸಾಗಿಬಂದ ಹಾದಿ ಅದರ ವೃತ್ತಿಪರತೆ ಮತ್ತು ಕಾಲಕ್ಕೆ ಅನುಗುಣವಾಗಿ ವಿಕಸನಗೊಳ್ಳುವ ಸಾಮಥ್ರ್ಯ ಹಾಗೂ ತಾಂತ್ರಿಕ ಸುಧಾರಣೆಗಳನ್ನು ಬಿಂಬಿಸುತ್ತದೆ. ಯುದ್ಧಗಳ ಸಂದರ್ಭ ಹಾಗೂ ನೈಸರ್ಗಿಕ ವಿಕೋಪಗಳ ವೇಳೆ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿರುವ ವಾಯುಪಡೆ ದೇಶದ ಹೆಮ್ಮೆಗೆ ಕಾರಣವಾಗಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin