ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ರಿಯೋ ಅಥ್ಲೆಟ್ ಸುಧಾಸಿಂಗ್ ಗೆ ಚಿಕಿತ್ಸೆ

ಈ ಸುದ್ದಿಯನ್ನು ಶೇರ್ ಮಾಡಿ

Sudha-singh

ಬೆಂಗಳೂರು, ಆ.23- ರಿಯೋ ಡಿ ಜನೈರೊದಲ್ಲಿ ತೀವ್ರ ಅನಾರೋಗ್ಯಕ್ಕೆ ಗುರಿಯಾಗಿ ಬೆಂಗಳೂರಿಗೆ ಹಿಂದಿರುಗಿರುವ ಕ್ರೀಡಾಪಟು ಸುಧಾಸಿಂಗ್ ಅವರಿಗೆ ಇಲ್ಲಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಉತ್ತರ ಪ್ರದೇಶ ಮೂಲದ ಮಹಿಳಾ ಅಥ್ಲೀಟ್ ಸುಧಾಸಿಂಗ್ ಅವರಿಗೆ ಕ್ರೀಡಾಕೂಟದ ವೇಳೆ ತೀವ್ರ ಜ್ವರ, ಕೀಲುನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ನಾಗರಬಾವಿಯಲ್ಲಿರುವ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ರಿಯೋ ಒಲಂಪಿಕ್ಸ್ನಲ್ಲಿ ಮಾರಕ ಝೀಕಾ ವೈರಸ್ ಭೀತಿ ಎದುರಾಗಿತ್ತು. ಹೀಗಾಗಿ ಹೆಚ್ಚಿನ ತನಿಖೆಗಾಗಿ ಸುಧಾಸಿಂಗ್ ಅವರ ರಕ್ತದ ಮಾದರಿಯನ್ನು ಪುಣೆಯ ವೈರಾಲಜಿ ಇನ್ಸ್ಟಿಟ್ಯೂಟ್ ಫಾರ್ ಝೀಕಾ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಡಾ.ಸರಳಾ ತಿಳಿಸಿದರು.

ಝೀಕಾ ವೈರಸ್ ಸೋಂಕು ಹರಡಿರಬಹುದು ಎಂಬ ಸಂಶಯದ ಮೇಲೆ ದೆಹಲಿಯ ವಿಶೇಷ ತಜ್ಞ ವೈದ್ಯರ ತಂಡ ಆಸ್ಪತ್ರೆಗೆ ಭೇಟಿ ನೀಡಲಿದ್ದು, ಸುಧಾಸಿಂಗ್ಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin