ಬೆಂಗಳೂರು : ಗುಂಡಿಟ್ಟು ಉದ್ಯಮಿ ಹತ್ಯೆಗೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

firing

ಬೆಂಗಳೂರು, ಮಾ.6- ತಲೆಗೆ ಗುಂಡು ಹಾರಿಸಿ ಉದ್ಯಮಿಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉದ್ಯಮಿ ಕಾರ್ತಿಕ್‍ ರೆಡ್ಡಿ ಎಂಬುವರನ್ನು ಪರಿಚತರೇ ಗುಂಡು ಹಾರಿಸಿ ಕೊಲೆ ಮಾಡಲು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಉದ್ಯಮಿ ಕಾರ್ತಿಕ್‍ರೆಡ್ಡಿ ಎಚ್‍ಎಎಲ್ ಠಾಣೆಗೆ ದೂರು ನೀಡಿದ್ದಾರೆ.  ಎಚ್‍ಎಎಲ್ ಬಳಿಯ ಇಸ್ರೋಬ್ಯಾಕ್‍ಗೇಟ್ ಬಳಿ ಮಾ.4ರಂದು ತಡರಾತ್ರಿ 12.30ರಲ್ಲಿ ಪರಿಚಿತರಾದ ಅಮೃತ್‍ರೆಡ್ಡಿ, ನಿಶ್ವಂತ್‍ರೆಡ್ಡಿ ಮತ್ತು ನಿಶ್ವಂತ್‍ರೆಡ್ಡಿಯ ಗನ್‍ಮ್ಯಾನ್ ತಲೆಗೆ ಗನ್ ಹಿಡಿದು ಗುಂಡು ಹಾರಿಸಲು ಮುಂದಾಗಿದ್ದಾರೆ. ಈ ವೇಳೆ ಕಾರ್ತಿಕ್‍ರೆಡ್ಡಿ ಅವರು ಗನ್‍ಮ್ಯಾನ್‍ನನ್ನು ತಳ್ಳಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಎಚ್‍ಎಎಲ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin