ಬೆಂಗಳೂರು ಮೆಟ್ರೋ ರೈಲ್ವೆಯಲ್ಲಿ ಮ್ಯಾನೇಜರ್ ಮತ್ತು ಇಂಜಿನಿಯರ್ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

metro

ಭಾರತ ಸರ್ಕಾರ ಸಹಭಾಗಿತ್ವದ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‍ಸಿಎಲ್) ನಲ್ಲಿ ವಿವಿಧ ಮ್ಯಾನೇಜರ್ ಮತ್ತು ಇಂಜಿನಿಯರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 33
ಹುದ್ದೆಗಳ ವಿವರ
1.ಜನರಲ್ ಮ್ಯಾನೇಜರ್ (ಅಪರೇಷನ್ಸ್) – 01
2.ಜನರಲ್ ಮ್ಯಾನೇಜರ್ (ಸಿಗ್ನಲಿಂಗ್ ಮತ್ತು ಟೆಲಿಕಾಂ) – 01
3.ಡೆಪ್ಯೂಟಿ ಜನರಲ್ ಮ್ಯಾನೇಜರ್ (ಪಿ ವೇ/ಸಿಎಸ್’ಡಬ್ಲ್ಯೂ) – 01
4.ಡೆಪ್ಯೂಟಿ ಜನರಲ್ ಮ್ಯಾನೇಜರ್ (ಟ್ರಾಕ್ಷನ್) – 01
5.ಡೆಪ್ಯೂಟಿ ಜನರಲ್ ಮ್ಯಾನೇಜರ್ (ಎಫ್ ಮತ್ತು ಎ) – 01
6.ಡೆಪ್ಯೂಟಿ ಜನರಲ್ ಮ್ಯಾನೇಜರ್ (ಹೆಚ್ ಆರ್) – 01
7.ಮ್ಯಾನೇಜರ್ (ಅಪರೇಷನ್ಸ್/ಒಸಿಸಿ) – 03
8.ಮ್ಯಾನೇಜರ್ (ಪಿ ಮತ್ತು ವೇ) 02
9.ಅಸಿಸ್ಟೆಂಟ್ ಮ್ಯಾನೇಜರ್ (ಎಫ್ ಮತ್ತು ಎ) – 04
10.ಅಸಿಸ್ಟೆಂಟ್ ಮ್ಯಾನೇಜರ್ (ಹೆಚ್ ಆರ್) – 04
11.ಮ್ಯಾನೇಜರ್ (ಐಟಿ) – 02
12.ಅಸಿಸ್ಟೆಂಟ್ ಮ್ಯಾನೇಜರ್ (ಐಟಿ) – 02
13.ಸೆಕ್ಷನ್ ಇಂಜಿನಿಯರ್ಸ್ – 03
14.ಜ್ಯೂನಿಯರ್ ಇಂಜಿನಿಯರ್ಸ್ – 07
ವಿದ್ಯಾರ್ಹತೆ : ಕ್ರ ಸಂ 1ರ ಹುದ್ದೆಗೆ ಎಲೆಕ್ಟ್ರಿಕಲ್/ಮ್ಯಾಕಾನಿಕಲ್/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್/ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪದವಿ, ಕ್ರ ಸಂ 2ರ ಹುದ್ದೆಗೆ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್/ ಕಂಪ್ಯೂಟರ್ ಸೈನ್ಸ್/ ಟೆಲಿಕಮ್ಯೂನಿಕೇಷನ್ ವಿಷಯದಲ್ಲಿ ಪದವಿ, ಕ್ರ ಸಂ 3ರ ಹುದ್ದೆಗೆ ಸಿವಿಲ್ ಇಂಜಿನಿಯರಿಂಗ್ ಪದವಿ, ಕ್ರ ಸಂ 4ರ ಹುದ್ದೆಗೆ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಮ್ಯಾಕಾನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ, ಕ್ರ ಸಂ 5ರ ಹುದ್ದೆಗೆ ಪದವಿ ಮತ್ತು ಭಾರತದ ಚಾರ್ಟೆಡ್ ಅಕೌಂಟ್ಸ್ ಸಂಸ್ಥೆಯಲ್ಲಿ ನಲ್ಲಿ ಸದಸ್ಯರಾಗಿರಬೇಕು. ಕ್ರ ಸಂ 6ರ ಹುದ್ದೆಗೆ ಯಾವುದೇ ಸ್ನಾತಕೋತ್ತರ ಪದವಿಯೊಂದಿಗೆ ಡಿಪ್ಲೋಮಾ ಇನ್ ಎಚ್.ಆರ್/ ಎಂಬಿಎ, ಕ್ರ ಸಂ 7ರ ಹುದ್ದೆಗೆ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ/ ಡಿಪ್ಲೋಮಾ, ಕ್ರ ಸಂ 8ರ ಹುದ್ದೆಗೆ ಸಿವಿಲ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ, 9ರ ಹುದ್ದೆಗೆ ಸಿವಿಲ್ ಫೈನಾನ್ಸ್ ವಿಷಯದಲ್ಲಿ ಎಂ.ಕಾಂ, ಎಂಬಿಎ / ಯಾವುದೇ ಪದವಿ ಜೊತೆ ಸಿಎ ಇಂಟರ್ / ಸಿಎಸ್ ಇಂಟರ್/ ಐಸಿಡಬ್ಲ್ಯೂಎ ಇಂಟರ್, ಕ್ರ ಸಂ 10ರ ಹುದ್ದೆಗೆ ಡಿಪ್ಲೋಮಾ ಇನ್ ಪರ್ಸನಲ್ ಮ್ಯಾನೇಜ್ ಮೆಂಟ್ ಜೊತೆಗೆ ಯಾವುದೇ ಪದವಿ, ಕ್ರ ಸಂ 11, 12ರ ಹುದ್ದೆಗೆ ಬಿಇ ಇನ್ ಕಂಪ್ಯೂಟರ್ ಸೈನ್ಸ್/ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್ ಪದವಿ ಪಡೆದಿರಬೇಕು.
ವಯೋಮಿತಿ : ಜನರಲ್ ಮ್ಯಾನೇಜರ್ ಹುದ್ದೆಗೆ ಗರಿಷ್ಠ 50 ವರ್ಷ, ಡೆಪ್ಯೂಟಿ ಜನರಲ್ ಮ್ಯಾನೇಜರ್ ಹುದ್ದೆಗೆ 45 ವರ್ಷ, ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ 40 ವರ್ಷ, ಸೆಕ್ಷನ್ ಮತ್ತು ಜ್ಯೂನಿಯರ್ ಇಂಜಿನಿಯರ್ಸ್ ಹುದ್ದೆಗೆ 35 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ : ಜನರಲ್ ಮ್ಯಾನೇಜರ್ (ಹೆಚ್.ಆರ್), ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್, ಮೂರನೇ ಮಹಡಿ, ಬಿಎಂಟಿಸಿ ಸಂಕೀರ್ಣ, ಕೆ.ಎಚ್ ರಸ್ತೆ, ಶಾಂತಿನಗರ, ಬೆಂಗಳೂರು – 560027 ಇಲ್ಲಿಗೆ ಸಲ್ಲಿಸುವಂತೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-03-2018

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ www.bmrc.co.in  ಗೆ ಭೇಟಿ ನೀಡಿ

ಅಧಿಸೂಚನೆ

BMRCL-maneger-fe8277_CareerFiles-001 BMRCL-maneger-fe8277_CareerFiles-002 BMRCL-maneger-fe8277_CareerFiles-003 BMRCL-maneger-fe8277_CareerFiles-004 BMRCL-maneger-fe8277_CareerFiles-005 BMRCL-maneger-fe8277_CareerFiles-006 BMRCL-maneger-fe8277_CareerFiles-007

Facebook Comments

Sri Raghav

Admin