ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಲ್ಲಿ ಸೇನೆಯ ಸಹಾಯವಾಣಿ

ಈ ಸುದ್ದಿಯನ್ನು ಶೇರ್ ಮಾಡಿ

City-Railway-Station

ಬೆಂಗಳೂರು, ಡಿ.6- ಭಾರತೀಯ ಸೇನೆಯ ಮೂರೂ ವಿಭಾಗಗಳಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ ಸಹಾಯ ವಾಣಿ ಸೌಲಭ್ಯ ಕಲ್ಪಿಸಲಾಗಿದೆ.   ಇಂದು ಪ್ಲಾಟ್ ಫಾರಂ ಸಂಖ್ಯೆ 1ರಲ್ಲಿ ವಿಭಾಗೀಯ ರೈಲ್ವೆ ಪ್ರಬಂಧಕ ಸಂಜೀವ್ ಅಗರ್ವಾಲ್, ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ಜನರಲ್ ಆಫೀಸರ್ ಕಮಾಂಡಿಂಗ್, ಮೇಜರ್ ಜನರಲ್ ಕೆ.ಎಸ್. ನಿಜ್ಜರ್ ಅವರ ಸಮ್ಮುಖದಲ್ಲಿ ಉದ್ಘಾಟಿಸಿದರು.
ಕಮಡೋರ್ ಎಂ.ಟಿ. ರಮೇಶ್, ಗ್ರೂಪ್ ಕ್ಯಾಪ್ಟನ್ ಟಿ.ಎಸ್. ರಾವ್ ಸೇರಿದಂತೆ ರಕ್ಷಣೆ ಹಾಗೂ ರೈಲ್ವೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಮೂವ್ ಮೆಂಟ್ ಕಂಟ್ರೋಲ್ ಸಂಸ್ಥೆ ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಈಗಾಗಲೆ ಇಂತಹ ಸೌಲಭ್ಯ ಕಲ್ಪಿಸಿದ್ದು, ಇದು ನಗರದಲ್ಲಿ ಎರಡನೆಯ ಸೌಲಭ್ಯವಾಗಿದೆ.

ಪ್ಲಾಟ್ ಫಾರಂ ಸಂಖ್ಯೆ 1ರಲ್ಲಿರುವ ಈ ಸಹಾಯ ಕೇಂದ್ರ ಬೆಂಗಳೂರಿನ ವಾಯುಪಡೆ ತರಬೇತಿ ಕಮಾಂಡ್ ಕೇಂದ್ರ ಕಚೇರಿ, ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ಕೇಂದ್ರ ಕಚೇರಿ ಹಾಗೂ ಚೆನ್ನೈನ ಎಂಬಾರ್ಕೇಶನ್ ಕೇಂದ್ರ ಕಚೇರಿಯ ಪ್ರಾಯೋಜಕತ್ವದಲ್ಲಿ ಸ್ಥಾಪನೆಯಾಗಿದೆ.   ಈ ರೈಲು ನಿಲ್ದಾಣದ ಮೂಲಕ ಪ್ರಯಾಣಿಸುವ ರಕ್ಷಣಾ ಪ್ರಯಾಣಿಕರು ಹಾಗೂ ಮಾಜಿ ಸೈನಿಕರಿಗೆ ನೂತನ ಸೌಲಭ್ಯದಿಂದ ಅನುಕೂಲವಾಗಲಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin