ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿ, ಕೂದಲೆಳೆ ಅಂತರದಲ್ಲಿ ಪಾರಾದ ಅನಂತ್‍ ಕುಮಾರ್ ಹೆಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar--01

ಕಾರವಾರ, ಏ.18- ಕೇಂದ್ರ ಕೌಶಲ್ಯ ಸಚಿವ ಅನಂತ್‍ಕುಮಾರ್ ಹೆಗಡೆ ಅವರ ಬೆಂಗಾವಲು ವಾಹನಕ್ಕೆ ಟ್ರಕ್ ಡಿಕ್ಕಿಯಾಗಿ ಸಚಿವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಕಳೆದ ರಾತ್ರಿ ರಾಷ್ಟ್ರೀಯ ಹೆದ್ದಾರಿ- 4ರ ಹಾವೇರಿ ಜಿಲ್ಲೆ ರಾಣೆಬೆನ್ನೂರು ಬಳಿ ನಡೆದಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೆರಳುತ್ತಿದ್ದ ಸಚಿವರು ವಾಹನದಲ್ಲಿ ಕಾರವಾರದ ಕಡೆಗೆ ತೆರಳುತ್ತಿದ್ದರು. ಇವರ ಭದ್ರತೆಗಾಗಿ ಬೆಂಗಾವಲು ವಾಹನ ಅವರ ಹಿಂದೆಯೇ ಬರುತ್ತಿತ್ತು.

ಇಂದು ಮುಂಜಾನೆ ನಿಯಮ ಉಲ್ಲಂಘಿಸಿ ಮುನ್ನುಗ್ಗಿದ ಟ್ರಕ್‍ವೊಂದು ಸಚಿವರ ಕಾರಿನ ಪಕ್ಕದಲ್ಲೇ ಹಾದು ಹೋಗಿ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣ ಅದರಲ್ಲಿದ್ದವರು ಹೊರಗೆ ಬಂದಿದ್ದಾರೆ.  ಈ ವೇಳೆ ಸಚಿವರು ಕಾರು ನಿಲ್ಲಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಎಎಸ್‍ಐವೊಬ್ಬರ ಕಾಲು ಮುರಿದಿದ್ದು , ಇನ್ನಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಪೊಲೀಸ್ ಬೆಂಗಾವಲು ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಟ್ವೀಟರ್‍ನಲ್ಲಿ ನನ್ನ ಹತ್ಯೆಗೆ ಪೂರ್ವ ನಿಯೋಜಿತ ಸಂಚು ಇದಾಗಿತ್ತು ಎಂದು ಅನಂತಕುಮಾರ್ ಹೆಗಡೆ ಅವರು ಆರೋಪಿಸಿದ್ದಾರೆ. ಲಾರಿ ಚಾಲಕ ಬೇಕಂತಲೇ ನನ್ನ ಕಾರಿಗೆ ಗುದ್ದಲು ಯತ್ನಿಸಿದ್ದಾನೆ. ಆದರೆ ಅದು ಅಕಸ್ಮಾತ್ ಆಗಿ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಹಾವೇರಿ ಎಸ್ಪಿ ಕೆ.ಪರಶುರಾಮ್ ಅವರು ಲಾರಿ ಚಾಲಕ ಅನ್ವರ್‍ನನ್ನು ವಿಚಾರಣೆಗೊಳಪಡಿಸಿದ್ದಾರೆ. ನಂತರ ಇದು ಆಕಸ್ಮಿಕ ಅಪಘಾತವೇ ಹೊರತು ಹತ್ಯೆ ಯತ್ನ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಘಟನೆ ಕುರಿತಂತೆ ತನಿಖೆ ಚುರುಕುಗೊಳಿಸಲಾಗಿದೆ.

Facebook Comments

Sri Raghav

Admin