ಬೆಂಬಲಿಗರ ಜೊತೆ ಚರ್ಚೆ, ಮುಂದಿನ ದಾಳ ಉರುಳಿಸಲು ಸೆಲ್ವಂ ತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Paneer-Slvam---01

ಚೆನ್ನೈ, ಫೆ.17– ಮುಖ್ಯಮಂತ್ರಿಯಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ ಯಡಪ್ಪಾಡಿ ಪಳನಿಸ್ವಾಮಿಯವರಿಗೆ ನಾಳೆ ಅಗ್ನಿ ಪರೀಕ್ಷೆ. ಸರ್ಕಾರ ರಚಿಸಲು ರಾಜ್ಯಪಾಲ ವಿದ್ಯಾಸಾಗರ್ ರಾವ್ ನೀಡಿರುವ ಆಹ್ವಾನದ ಮೇರೆಗೆ ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಪಳನಿ ಅಣಿಯಾಗಿದ್ದಾರೆ. 235 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 117 ಶಾಸಕರ ಬಲ ಅಗತ್ಯ. ಎಐಎಡಿಎಂಕೆ 135 ಶಾಸಕರನ್ನು ಹೊಂದಿದ್ದು, ಪಳನಿ ಪರ 122 ಮಂದಿ ಇದ್ದಾರೆ. ಸೆಲ್ವಂ ಬಳಿ ಇರುವ ಶಾಸಕರ ಸಂಖ್ಯೆ 10 ಮಾತ್ರ. ಉಳಿದ ಮೂವರು ಜನಪ್ರತಿನಿಧಿಗಳು ತಟಸ್ಥರಾಗಿದ್ದಾರೆ.

ಡಿಎಂಕೆ 89 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಅನುಕ್ರಮವಾಗಿ 8 ಮತ್ತು 1 ಸ್ಥಾನ ಪಡೆದಿದೆ. ಜಯಲಲಿತಾರ ನಿಧನಾನಂತರ ಕೆ.ಆರ್. ನಗರ್ ವಿಧಾನಸಭಾ ಕ್ಷೇತ್ರ ತೆರವಾಗಿದೆ.   ನಾಳಿನ ಬಲಾಬಲಾ ಪರೀಕ್ಷೆಯಲ್ಲಿ ಪಳನಿ ಅವರು ಬಹುಮತ ಸಾಬೀತುಪಡಿಸುವುದು ಬಹುತೇಕ ಖಚಿತವಾಗಿದ್ದರೂ ಘಟಿಸಬಹುದಾದ ಅನಿರೀಕ್ಷಿತ ಬೆಳವಣಿಗೆ ಹಿನ್ನೆಲೆಯಲ್ಲಿ ನಾಳೆ ಪಳನಿಸ್ವಾಮಿಗೆ ಒಂದು ರೀತಿಯ ಅಗ್ನಿ ಪರೀಕ್ಷೆ ಎದುರಾಗಲಿದೆ.   ನಾಳೆ ಬಹುಮತ ಸಾಬೀತುಪಡಿಸಲು ಮತದಾನವನ್ನು ಹೇಗೆ ನಡೆಸಬೇಕೆಂಬ ಬಗ್ಗೆ ವಿಧಾನಸಭಾಧ್ಯಕ್ಷರು ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಧ್ವನಿಮತ ಅಥವಾ ರಹಸ್ಯ ಮತದಾನದ ಮೂಲಕ ಈ ಪ್ರಕ್ರಿಯೆ ನಡೆಸಬೇಕೆ ಎಂಬ ಬಗ್ಗೆ ಚರ್ಚೆ ನಡೆದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin