ಬೆಂಬಿಡದೆ ಕಾಡುತ್ತಿರುವ ಆನೆಗಳ ಕಾಟ : ರೈತರ ಬೆಳೆ ನಾಶ

ಈ ಸುದ್ದಿಯನ್ನು ಶೇರ್ ಮಾಡಿ

channapatana-5

ಚನ್ನಪಟ್ಟಣ, ಸೆ.27- ತಾಲೂಕಿನ ಶ್ಯಾನುಬೋಗನಹಳ್ಳಿ ಗ್ರಾಮದಲ್ಲಿ ಮತ್ತೆ ಆನೆಗಳ ದಾಳಿ ಮರುಕಳಿಸಿದ್ದು, ನಾಲ್ವರು ರೈತರ ಜಮೀನಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸಿವೆ.ಶನಿವಾರ ರಾತ್ರಿ ದಾಳಿ ನಡೆಸಿದ ಆನೆಗಳು ಬಸವರಾಜು ಅವರಿಗೆ ಸೇರಿದ 4 ಎಕರೆ ಜೋಳ, ಮರಿಗೌಡ ಎಂಬುವರ 1 ಎಕರೆ ಭತ್ತ, ಮರಿಸ್ವಾಮಿ ಎಂಬುವರ 4 ಎಕರೆ ಜೋಳ ಹಾಗೂ ರಾಜು ಎಂಬುವರ 1 ಎಕರೆ ರಾಗಿ ಬೆಳೆಯನ್ನು ಆನೆಗಳು ಹಾನಿಮಾಡಿವೆ. ಇದರಿಂದ ಸಾವಿರಾರು ರೂ. ನಷ್ಟ ಸಂಭವಿಸಿದೆ.

ಆನೆಗಳು ಕಬ್ಬಾಳು, ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಆಗಮಿಸಿದ್ದು, ಈ ಭಾಗದಲ್ಲಿ ಪದೇ ಪದೇ ದಾಳಿ ನಡೆಸುತ್ತಲೇ ಇವೆ. ರೈತರ ಬಾಳೆ, ಮಾವು, ತೆಂಗು ಹಾಗೂ ತರಕಾರಿ ಬೆಳೆಗಳು ನಾಶವಾಗುತ್ತಲೆ ಇವೆ. ಆನೆಗಳ ದಾಳಿಯನ್ನು ಶಾಶ್ವತವಾಗಿ ನಿಯಂತ್ರಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಆನೆದಾಳಿಯಿಂದ ಹಾನಿಗೀಡಾಗಿರುವ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು, ಕೂಡಲೇ ಆನೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಕೋಡಂಬಹಳ್ಳಿ ನಾಗರಾಜು ಆಗ್ರಹಪಡಿಸಿದ್ದಾರೆ.

 

► Follow us on –  Facebook / Twitter  / Google+

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin