ಬೆಂವಿವಿ ದ ಸಸ್ಯಶಾಸ್ತ್ರ ವಿಭಾಗದಲ್ಲಿ ಯೋಜನಾರ್ಥಿ ಹುದ್ದೆಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

Job-Updates

ಬೆಂಗಳೂರು, ಆ.28- ಬೆಂಗಳೂರು ವಿವಿ ಎಂಎಸ್ಸಿ, ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದವರಿಂದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ- ಸುರ್ಬನ್ ಧನಸಹಾಯ ಆಯೋಗದಿಂದ ಮಂಜೂರಾಗಿರುವ ಸ್ಟಡೀಸ್ ಆನ್ ಮೈಕ್ರೋಪ್ರಾಪಗೇಶನ್, ಫೈಟೋಕೆಮಿಸ್ಟ್ರಿ ಅಂಡ್ ಮಾಲಿಕ್ಯೂಲಾರ್ ಕ್ಯಾರೆಕ್ಟರೈಜೇಷನ್ ಆಫ್ ಅರಿಸ್ಟೋಲೋಕಿಯ ಟಗಾಲ ಚಾಮ್ ಅಂಡ್ ವೈಟೆಕ್ಸ್ ಟ್ರೈಫೋಲಿಯ ಲಿ. ರೇರ್ ಅಂಡ್ ಎನ್ಡೆಂಜರ‍್ಸ್ ಮೆಡಿಸಿನ್ ಪ್ಲಾನ್ಟ್ಸ್ ಎಂಬ ಯೋಜನೆಯಲ್ಲಿ ಒಂದು ಯೋಜನಾರ್ಥಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.   ಆಸಕ್ತಿಯುಳ್ಳ ಅಭ್ಯರ್ಥಿಗಳು ಪೂರ್ಣ ವಿಳಾಸದೊಂದಿಗೆ ದೂರವಾಣಿ ಸಂಖ್ಯೆ ನಮೂದಿಸಿ ಬಿಳಿ ಹಾಳೆಯಲ್ಲಿ ಅರ್ಜಿ ಬರೆದು, ದೃಢೀಕೃತ ವಿದ್ಯಾರ್ಹತೆಯ ದಾಖಲೆಗಳೊಂದಿಗೆ ಆ.31ರೊಳಗೆ ಪ್ರೊ.ಎಲ್.ರಾಜಣ್ಣ, ಪ್ರಧಾನ ಸಂಶೋಧಕರು, ಸಸ್ಯಶಾಸ್ತ್ರ ವಿಭಾಗ, ಬೆಂಗಳೂರು-56 ಇವರಿಗೆ ಅಂಚೆ ಮೂಲಕ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕವನ್ನು ನಂತರ ಕರೆ ಮೂಲಕ ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin