ಬೆನ್ನಿಗೆ ಚೂರಿ ಹಾಕುವ ಪಾಕ್’ನ್ನು ‘ಭಯೋತ್ಪಾದಕ ರಾಷ್ಟ್ರ’ ಎಂದು ಮಸೂದೆ ಮಂಡಿಸಿದ ಅಮೆರಿಕ ಸಂಸದರು..!

ಈ ಸುದ್ದಿಯನ್ನು ಶೇರ್ ಮಾಡಿ

UN

ವಾಷಿಂಗ್ಟನ್, ಸೆ. 20- ಮಹ್ವತದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಪರಿಗಣಿಸುವ ಮಸೂದೆಯೊಂದನ್ನು ಅಮೆರಿಕದ ಇಬ್ಬರು ಪ್ರಬಲ ಸಂಸದರು ಪ್ರತಿನಿಧಿಗಳ ಸದನದಲ್ಲಿ ಮಂಡಿಸುವುದರೊಂದಿಗೆ ಇಸ್ಲಾಮಾಬಾದ್ಗೆ ತೀವ್ರ ಹಿನ್ನೆಡೆಯಾಗಿದೆ. ಬೆನ್ನಿಗೆ ಚೂರಿ ಹಾಕುವ ಪಾಕಿಸ್ತಾನದ ಇಬ್ಬಗೆ ನೀತಿಗೆ ಕಡಿವಾಣ ಹಾಕಲು ಅಮೆರಿಕಾಗೆ ಇದು ಸಕಾಲ ಎಂದು ಅವರು ಹೇಳಿದ್ದಾರೆ. ಭಾರತ ಸೇರಿದಂತೆ ಏಷ್ಯಾ ಪ್ರಾಂತ್ಯದ ದೇಶಗಳಿಗೆ ಇದೊಂದು ಅತ್ಯಂತ ಆಶಾದಾಯಕ ವಿದ್ಯಮಾನವಾಗಿದೆ. ಭಯೋತ್ಪಾದನೆ ನಿಯೋಜನೆ ಪಾಕಿಸ್ತಾನ ಪ್ರಾಯೋಜಿತ ಕಾಯ್ದೆ (ಎಚ್ಆರ್ 6069) ವಿಧೇಯಕವನ್ನು ರಿಪಬ್ಲಿಕನ್ ಪಕ್ಷದ ಮುಖಂಡ ಟೆಡ್ ಪೊಯಿ ಮತ್ತು ಭಯೋತ್ಪಾದನೆ ಕುರಿತು ಪ್ರಭಾವಿ ಕಾಂಗ್ರೆಸ್ ಸಮಿತಿಯ ಸದಸ್ಯರೂ ಆದ ಡೆಮೋಕ್ರಾಟ್ನ ಡಾನಾ ರೋಹ್ರಾಬಚೆರ್ ಮಂಡಿಸಿದ್ದಾರೆ.

ಬೆನ್ನಿಗೆ ಚೂರಿ ಹಾಕಿರುವ ಮತ್ತು ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುತ್ತಿರುವ ಪಾಕಿಸ್ತಾನಕ್ಕೆ ಕಡಿವಾಣ ಹಾಕಲು ನಮಗಿದು ಸಕಾಲ ಎಂದು ಭಯೋತ್ಪಾದನೆ ಕುರಿತು ಸದನದ ಉಪಸಮಿತಿ ಅಧ್ಯಕ್ಷ ಟೆಡ್ ಪೊಯಿ ಹೇಳಿದ್ದಾರೆ.  ಪಾಕಿಸ್ತಾನವು ನಂಬಿಕೆಗೆ ಯೋಗ್ಯವಲ್ಲದ ಮಿತ್ರರಾಷ್ಟ್ರವಾಗಿದೆ. ಅಲ್ಲದೇ ಅನೇಕ ವರ್ಷಗಳಿಂದ ಅಮೆರಿಕ ಕಡುವೈರಿಗಳಿಗೆ ನೆರವು ಮತ್ತು ಕುಮ್ಮಕ್ಕು ನೀಡುತ್ತಿದೆ. ಓಸಮಾ ಬಿನ್ ಲಾಡೆನ್ಗೆ ಆಶ್ರಯ ನೀಡುವುದರಿಂದ ಹಿಡಿದು ಹಖಾನಿ ಭಯೋತ್ಪಾದನೆ ಜಾಲದೊಂದಿಗೆ ಅದು ಸಂಬಂಧ ಹೊಂದಿದೆ. ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಪಾಕಿಸ್ತಾನ ಯಾರ ಪರವಾಗಿದೆ ಎಂಬುದಕ್ಕೆ ಇದಕ್ಕಿಂತ ಬಲವಾದ ಸಾಕ್ಷಿ ಇದೆ ಎಂದು ಟೆಡ್ ವಿವರಿಸಿದ್ದಾರೆ.

ಈ ಪ್ರಶ್ನೆಗೆ ಒಬಮಾ ಆಡಳಿತ ಅಧಿಕೃತವಾಗಿ ಉತ್ತರಿಸಬೇಕು ಎಂಬುದನ್ನು ಈ ಮಸೂದೆ ಬಯಸಿದೆ. ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಪಾಕಿಸ್ತಾನವು ಬೆಂಬಲ ನೀಡಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಈ ವಿಧೇಯಕ ಮಂಡನೆಯಾದ 90 ದಿನಗಳ ಒಳಗೆ ಅಧ್ಯಕ್ಷರು ಒಂದು ವರದಿಯನ್ನು ನೀಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin