ಬೆಳಗಾವಿಯಲ್ಲಿ ನಡೀತು ಘೋರ ಕೃತ್ಯ, ಅತ್ಯಾಚಾರವೆಸಗಿ ವೃದ್ಧೆಯ ಕೊಲೆ
ಈ ಸುದ್ದಿಯನ್ನು ಶೇರ್ ಮಾಡಿ
ಬೆಳಗಾವಿ, ಜ.27- ಮಾನಸಿಕ ಅಸ್ವಸ್ಥೆಯಾದ ವೃದ್ಧೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಧ್ಯರಾತ್ರಿ ಕಾಮುಕರು ಜಿಲ್ಲಾಸ್ಪತ್ರೆ ಆವರಣದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾರೆ. ಸದಾ ಜನರಿಂದ ತುಂಬಿರುವ ಬಿಮ್ಸ್ ಆವರಣದ ಕ್ಯಾಂಟಿನ್ ಕಟ್ಟಡದಲ್ಲಿ ಕಾಮುಕರು ಕೃತ್ಯ ನಡೆಸಿದ್ದಾರೆ. ಕಳೆದ ಏಳೆಂಟು ತಿಂಗಳಿನಿಂದ ಆಸ್ಪತ್ರೆ ಆವರಣದಲ್ಲಿ ವಾಸವಾಗಿದ್ದ ಅಜ್ಜಿಯ ಬಾಯಿಯಲ್ಲಿ ಬಟ್ಟೆ ತುರುಕಿ ಅತ್ಯಾಚಾರ ಮಾಡಿದ ಕಾಮುಕರು ನಂತರ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಅಜ್ಜಿ ಮೇಲೆ ಅತ್ಯಾಚಾರ, ಕೊಲೆ ಮಾಡಿದ ಎರಡನೆ ಘಟನೆ ಇದಾಗಿದೆ. ಸ್ಥಳಕ್ಕೆ ಡಿಸಿಪಿ ಸೀಮಾ ಲಾಟ್ಕರ ಸೇರಿದಂತೆ ಹಿರಿಯ ಪೆಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Facebook Comments