ಬೆಳೆ ವಿಮೆ ಪಾವತಿ ಅವಧಿ ವಿಸ್ತರಣೆಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

corporation-bank

 

ಬೇಲೂರು, ಆ.12- ಬೆಳೆವಿಮೆ ಪಾವತಿಗೆ ಕರೆ ದಿನದಂದು ಹೆಬ್ಬಾಳು ಕಾರ್ಪೊರೇಷನ್  ಬ್ಯಾಂಕ್‍ನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಸಿದ್ದರಿಂದ ನೂಕು ನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ವಿಮೆ ಪಾವತಿಯ ಅವಧಿಯನ್ನು ವಿಸ್ತರಿಸಬೇಕು ಆಗ್ರಹಿಸಿದರು. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆಯ ಪ್ರೀಮಿಯಂ ಹಣ ಪಾವತಿಗೆ ಜುಲೈ 30 ಕಡೆ ದಿನವಾದ ಬಳಿಕ, ಇನ್ನು ಹೆಚ್ಚಿನ ರೈತರು ಬೆಳೆವಿಮೆ ಯೋಜನೆ ಒಳಪಟ್ಟಿಲ್ಲ ಎಂಬ ಕಾರಣದಿಂದ ಸರ್ಕಾರ ಆಗಸ್ಟ್ 10ರ ತನಕ ವಿಮೆ ಕಟ್ಟಲು ಅವಧಿ ವಿಸ್ತರಿಸಿತ್ತು. ಆದರೆ ರೈತರು ಬೆಳೆವಿಮೆಯನ್ನು ಬ್ಯಾಂಕ್‍ಗಳಿಗೆ ಕಟ್ಟಲು ಬ್ಯಾಂಕ್‍ಗೆ ರಜೆಗಳು ಸೇರಿದಂತೆ ಇಂಟರ್‍ನೆಟ್ ಕೈಕೊಡುತ್ತಿದ್ದುದರಿಂದ ಬಹುತೇಕ ರೈತರು ಬೆಳೆವಿಮೆ ಕಟ್ಟಲು ಸಾದ್ಯವಾಗಿರಲಿಲ್ಲ. ಆದರೆ ಕಡೆದಿನದಂದು ಬ್ಯಾಂಕ್ ಮುಂದೆ ರೈತರ ಸಂಖ್ಯೆಯಲ್ಲಿ ಹೆಚ್ಚಾಗಿತ್ತು.
ಕಳೆದ ವರ್ಷದಲ್ಲಿ ಬೆಳೆವಿಮೆಯನ್ನು ಬ್ಯಾಂಕ್ ಅಥಾವ ಸಹಕಾರಿ ಸಂಘಗಗಳಲ್ಲಿ ವಿಮೆಯನ್ನು ಪಾವತಿ ಮಾಡಿ ಅಗತ್ಯ ರಶೀದಿ ಪಡೆದರೆ ಯೋಜನೆಗೆ ರೈತರು ಸೇರುತ್ತಿದ್ದರು, ಆದರೆ ಈ ಬಾರಿಯ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ವಿಮೆ ಹಣ ಪಾವತಿಗೆ ಷರತ್ತಿನೊಂದಿಗೆ ಅನ್‍ಲೈನ್‍ನಲ್ಲಿ ನೊಂದಣಿ ಮಾಡಬೇಕು. ಅರ್ಜಿ ಸ್ವೀಕೃತಿಗೆ ರೈತರಿಗೆ ತಕ್ಕ ರಶೀದಿ ಬರುವಂತೆ ನೊಡಿಕೊಳ್ಳಬೇಕು. ಆದರೆ ಅನ್‍ಲೈನ್ ಮೂಲಕ ಪ್ರತಿ ರೈತರಿಗೆ ನೊಂದಣಿ ಮಾಡುವ ಸಮಯದಲ್ಲಿ ಇಂಟರ್‍ನೆಟ್ ಕೈಕೊಡುತಿದ್ದದು ರೈತರಿಗೆ ತಲೆನೋವು ತಂದಿತ್ತು.
ಈ ಹಿನ್ನೆಲೆಯಲ್ಲಿ ಹಣ ಪಾವತಿ ಅವಧಿಯನ್ನು ವಿಸ್ತರಿಸುವಂತೆ ಒತ್ತಾಯಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin