ಬೆಳ್ತಂಗಡಿಯ ಯೋಧ ಏಕನಾಥ್ ಶೆಟ್ಟಿ ಹುತಾತ್ಮ : ಕುಟುಂಬಸ್ಥರಿಗೆ ಸಮವಸ್ತ್ರ ಹಸ್ತಾಂತರ

ಈ ಸುದ್ದಿಯನ್ನು ಶೇರ್ ಮಾಡಿ

Ekanath-Shetty

ಮಂಗಳೂರು,ಅ.28-ಜುಲೈ 22ರಂದು ಚೆನ್ನೈನಿಂದ ಅಂಡಮಾನ್ ಪೊಟ್‍ಬ್ಲೇರ್‍ಗೆ ಹೋಗುತ್ತಿದ್ದ ಎಎನ್ 32 ವಿಮಾನ ನಾಪತ್ತೆ ಪ್ರಕರಣ ಇನ್ನು ನಿಗೂಢವಾಗೇ ಇದೆ. ಇದರಿಂದಾಗಿ ಅದರಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ದೃಢಿಕರೀಸಲಾಗುತ್ತಿದೆ. ಈ ಸಂಬಂಧ ವಿಮಾನದಲ್ಲಿದ್ದ ಮಂಗಳೂರಿನ ಬೆಳ್ತಂಗಡಿಯ ವಾಯುಸೇನೆಯ ಯೋಧ ಏಕನಾಥ್ ಶೆಟ್ಟಿ ಅವರು ಕೂಡ ಮೃತಪಟ್ಟಿದ್ದಾರೆ ಎಂದು ಘೋಷಿಸಿ ಅವರ ಸೇನಾ ಸಮವಸ್ತ್ರವನ್ನು ಕುಟುಂಬಕ್ಕೆ ಇಂದು ನೀಡಲಾಯಿತು.  ದೆಹಲಿಯಿಂದ ವಾಯುಪಡೆಯ ಹಿರಿಯ ಅಧಿಕಾರಿಗಳು ಜೊತೆಯಲ್ಲಿ ತಂದ ಸಮವಸ್ತ್ರವನ್ನು ಇಂದು ಬೆಳಗ್ಗೆ ಮಂಗಳೂರಿಗೆ ವಿಮಾನದ ಮೂಲಕ ತರಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅದನ್ನು ತಂದು ನಂತರ ವರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ನಂತರ ಸರ್ಕಾರಿ ಗೌರವಗಳೊಂದಿಗೆ ಯೋಧನ ಸಮವಸ್ತ್ರವನ್ನು ಕುಟುಂಬಕ್ಕೆ ಸಲ್ಲಿಸಲಾಯಿತು. ಸಚಿವ ರಮಾನಾಥ್ ರೈ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಸುಮಾರು 25ಕ್ಕೂ ಹೆಚ್ಚು ಮಂದಿ ಇದ್ದ ವಾಯುಪಡೆ ವಿಮಾನ ನಿಗೂಢವಾಗಿ ಕಣ್ಮರೆಯಾಗಿದ್ದು, ಇದುವರೆಗೆ ಮೃತದೇಹಗಳಾಗಿ, ವಿಮಾನದ ಅವಶೇಷಗಳು ಕೂಡ ಪತ್ತೆಯಾಗಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin