ಬೆಳ್ಳಂಬೆಳಗ್ಗೆ ಘರ್ಜಿಸಿದ ಪೊಲೀಸರ ಪಿಸ್ತೂಲು, ರೌಡಿ ಶೀಟರ್ ಸೇರಿ ಇಬ್ಬರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Firing--01

ಕನಕಪುರ, ಏ.1- ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ಹಾಗೂ ಈತನ ಸಹಚರನೊಬ್ಬನನ್ನು ಗುಂಡು ಹಾರಿಸುವ ಮೂಲಕ ಬಲೆಗೆ ಬೀಳಿಸಿಕೊಳ್ಳುವಲ್ಲಿ ತಲಘಟ್ಟಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರು ಹೊರವಲಯದ ತಲಘಟ್ಟಪುರ ಸಮೀಪದ ನೈಸ್ ರಸ್ತೆ ಬಳಿ ಇಂದು ಮುಂಜಾನೆ ರೌಡಿ ಶೀಟರ್ ಕೆಂಬತ್ತಹಳ್ಳಿಯ ಪರಮೇಶ್ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ ಇನ್‍ಸ್ಪೆಕ್ಟರ್ ಶಿವಸ್ವಾಮಿ ಮತ್ತು ಎಸ್‍ಐ ಶಿವಕುಮಾರ್ ಅವರು ಹೆಡ್‍ಕಾನ್‍ಸ್ಟೆಬಲ್ ಸುರೇಶ್ ಮತ್ತು ಕಾನ್‍ಸ್ಟೆಬಲ್ ನೇಮಿನಾಥ್ ಅವರೊಂದಿಗೆ ಕಾರ್ಯಾಚರಣೆಗೆ ತೆರಳಿದ್ದಾರೆ.

ಸ್ಥಳಕ್ಕೆ ಈ ತಂಡ ತೆರಳುತ್ತಿದ್ದಂತೆ ರೌಡಿ ಪರಮೇಶ್ ಮತ್ತು ಈತನ ಸಹಚರ ಸಂತೋಷ್ ಪೊಲೀಸರ ಮೇಲೆಯೇ ಲಾಂಗ್‍ಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಇನ್‍ಸ್ಪೆಕ್ಟರ್ ಶಿವಸ್ವಾಮಿ ಶರಣಾಗುವಂತೆ ಆರೋಪಿಗಳಿಗೆ ಎಚ್ಚರಿಕೆ ನೀಡಿದರೂ ಕೆಳದಿದ್ದಾಗ ಆತ್ಮರಕ್ಷಣೆಗಾಗಿ ತಮ್ಮ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಈ ಸಂದರ್ಭದಲ್ಲಿ ಆರೋಪಿ ಪರಮೇಶ್ ಹಾಗೂ ಸಂತೋಷ್ ಕಾಲಿಗೆ ಗುಂಡು ತಗುಲಿ ಕುಸಿದುಬಿದ್ದಿದ್ದು, ತದನಂತರ ಇವರಿಬ್ಬರನ್ನು ವಶಕ್ಕೆ ಪಡೆದು ಆ್ಯಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಸುರೇಶ್ ಮತ್ತು ನೇಮಿನಾಥ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ತಲಘಟ್ಟಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin