ಬೆಳ್ಳಂಬೆಳಗ್ಗೆ ಪೊಲೀಸಪ್ಪ ಫುಲ್ ಟೈಟ್ ..!
ತುಮಕೂರು, ಏ.19- ಟೈಟು… ಟೈಟು… ಫುಲ್ ಟೈಟು… ಬೆಳಗ್ಗೆ ಬೆಳಗ್ಗೆಯೇ ನಮ್ಮ ಪೂಲೀಸಪ್ಪನರೋ ಕಂಠಪೂರ್ತಿ ಕುಡಿದು ಬಸ್ ನಿಲ್ದಾಣದಲ್ಲಿ ವಾಲಾಡುತ್ತಿದ್ದ ದೃಶ್ಯ ಕಂಡುಬಂದಿದ್ದು ಗೃಹ ಸಚಿವರ ಜಿಲ್ಲೆ ತುಮಕೂರು ಪಟ್ಟಣದ ಬಸ್ ನಿಲ್ದಾಣದ ಮುಂದೆ. ಪಾವಗಡ ತಾಲೂಕಿನ ಠಾಣೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೇದೆಯೊಬ್ಬರು ತುಮಕೂರಿನ ಖಾಸಗಿ ಬಸ್ ನಿಲ್ದಾಣದ ಎದುರಿಗಿರುವ ಬಾರ್ನಲ್ಲಿ ಕಂಠಪೂರ್ತಿ ಕುಡಿದು ಸಮವಸ್ತ್ರದಲ್ಲಿಯೇ ಬಿದ್ದಿದ್ದ ದೃಶ್ಯ ಇಲಾಖೆಗೆ ಮುಜುಗರ ಉಂಟುಮಾಡಿದೆ.
ಕೂಡಲೇ ನಗರ ಠಾಣೆಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ಪೂಲೀಸರು ನೀರು ಸುರಿದರೂ ಕಾನ್ಸ್ಟೆಬಲ್ ಮಾತ್ರ ಎಚ್ಚರಗೊಳ್ಳಲಿಲ್ಲ. ಕೂಡಲೇ ಅವರನ್ನು ಆ್ಯಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಾರ್ವಜನಿಕರಿಗೆ ಬುದ್ಧಿ ಹೇಳಬೇಕಾದವರೆ ಈ ರೀತಿ ಕುಡಿದು ರಸ್ತೆಯಲ್ಲಿ ಓಡಾಡಿದರೆ ಶಿಸ್ತಿನ ಇಲಾಖೆ ಎಂದು ಕರೆಸಿಕೊಳ್ಳುವ ಪೂಲೀಸ್ ಇಲಾಖೆಗೆ ಕಪ್ಪು ಚುಕ್ಕೆ ಬಂದಂತಾಗುತ್ತದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS