ಬೆಳ್ಳಾರ ಶಾಲೆಗೆ ಸಮಗ್ರ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

huliyuru-2

ಹುಳಿಯಾರು, ಆ.24- ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗಳ 2005-16 ನೇ ಸಾಲಿನ ಬಿ ವಿಭಾಗದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹುಳಿಯಾರು ಹೋಬಳಿ ಬೆಳ್ಳಾರ ಶಾಲೆಯ ಮಕ್ಕಳು ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.  ಗಂಡು ಮಕ್ಕಳ ವಿಭಾಗ: 100 ಮೀ. ಓಟದಲ್ಲಿ ಬಿ.ಎಚ್.ಅಭಿಷೇಕ್(ಪ್ರಥಮ), 200 ಮೀ. ಓಟದಲ್ಲಿ ಜಿ.ಎಸ್.ಮಾರುತಿ(ಪ್ರಥಮ), 400 ಮೀ. ಓಟದಲ್ಲಿ ಬಿ.ಎನ್.ಮಾರುತಿ(ದ್ವಿತೀಯ), 600 ಮೀ. ಓಟದಲ್ಲಿ ಬಿ.ಎಚ್.ಅಭಿಷೇಕ(ಪ್ರಥಮ), ಸಿ.ಮನು(ದ್ವಿತೀಯ), ಉದ್ದ ಜಿಗಿತದಲ್ಲಿ ಬಿ.ಎಚ್.ಅಭಿಷೇಕ(ದ್ವಿತೀಯ), ಎತ್ತರ ಜಿಗಿತದಲ್ಲಿ ಸಿ.ಮನು(ದ್ವಿತೀಯ), ಚಕ್ರ ಎಸೆತದಲ್ಲಿ ಬಿ.ಎನ್.ಮನು(ಪ್ರಥಮ) ಬಹುಮಾನ ಪಡೆದಿದ್ದಾರೆ. ಹೆಣ್ಣುಮಕ್ಕಳ ವಿಭಾಗ: 100 ಮೀ. ಓಟದಲ್ಲಿ ವರ್ಷಿತ(ಪ್ರಥಮ), 200 ಮೀ. ಓಟದಲ್ಲಿ ಎಚ್.ವರ್ಷಿತ(ಪ್ರಥಮ), ಬಿ.ಸಿ.ವರಲಕ್ಷ್ಮಿ(ದ್ವಿತೀಯ), 400 ಮೀ. ಓಟದಲ್ಲಿ ಎಚ್.ರಂಜಿತ(ಪ್ರಥಮ), ಕವನ(ದ್ವಿತೀಯ), 600 ಮೀ. ಓಟದಲ್ಲಿ ವರ್ಷಿತ(ಪ್ರಥಮ), ಬಿ.ಸಿ.ವರಲಕ್ಷ್ಮೀ(ದ್ವಿತೀಯ), ಎತ್ತರ ಜಿಗಿತದಲ್ಲಿ ವರ್ಷಿತ(ಪ್ರಥಮ), ಎಸ್.ಚೈತ್ರ(ದ್ವಿತೀಯ), ಗುಂಡುಎಸೆತದಲ್ಲಿ ಡಿ.ಚಂದನ(ದ್ವಿತೀಯ) ಬಹುಮಾನ ಪಡೆದಿದ್ದಾರೆ.

ಗಂಡುಮಕ್ಕಳ ಗುಂಪು ಆಟದಲ್ಲಿ ಖೋಖೋ, ವಾಲಿಬಾಲ್, ಬ್ಯಾಡ್ಮಿಂಟನ್ ಹಾಗೂ ರಿಲೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಹೆಣ್ಣು ಮಕ್ಕಳ ಗುಂಪು ಆಟದಲ್ಲಿ ಖೋಖೋ, ವಾಲಿಬಾಲ್, ಬ್ಯಾಡ್ಮಿಂಟನ್ ಹಾಗೂ ರಿಲೆಯಲ್ಲಿ ಪ್ರಥಮ ಬಹುಮಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ವಿದ್ಯಾರ್ಥಿಗಳ ಈ ಸಾಧನೆಗೆ ಮುಖ್ಯಶಿಕ್ಷಕ ಉಮಾಮಹೇಶ್ವರ ಸ್ವಾಮಿ, ಎಸ್.ಡಿ.ಎಮ್.ಸಿ. ಅದ್ಯಕ್ಷ ರವಿಕುಮಾರ್, ತಂಡದ ಮ್ಯಾನೇಜರ್ ಮಂಜುನಾಥ್, ಕೆ.ಸಿ.ಪದ್ಮ, ದೈಹಿಕ ಶಿಕ್ಷಣ ಶಿಕ್ಷಕರಾದ ಎಂ.ತ್ಯಾಗರಾಜು ಹರ್ಷ ವ್ಯಕ್ತಪಡಿಸಿದ್ದು ತಾಲೂಕು ಮಟ್ಟದಲ್ಲೂ ಸಾಧನೆಯ ಕೀರ್ತಿ ಪತಾಕೆ ರಾರಾಜಿಸಲಿ ಎಂದು ಶುಭ ಹಾರೈಸಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin