ಬೆಳ್ಳಿ ಪರದೆ ಮೇಲೆ ಕೆಂಪಮ್ಮನ ಕೋರ್ಟ್ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

Kempamma

ಕೆಲ ವರ್ಷಗಳ ಹಿಂದಷ್ಟೇ ಪೂರ್ವಾಪರ ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದ ಎಡಕಲ್ಲು ಗುಡ್ಡದ ಚಂದ್ರಶೇಖರ ಈಗ ಮತ್ತೊ ಂದು ಸಾಮಾಜಿಕ ಕಳಕಳಿ ಹೊಂದಿರು ವಂಥ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ.   ಈಗಿನ ರಾಜಕೀಯ, ಕಾನೂನು ವ್ಯವಸ್ಥೆಯಡಿ ಸಾಮಾನ್ಯ ಪ್ರಜೆ ಹೇಗೆಲ್ಲ ಪರಿತಾಪ ಪಡಬೇಕಾಗುತ್ತದೆ ಎಂಬುದನ್ನು ಕೆಂಪಮ್ಮ ಎಂಬ ವೃದ್ಧೆಯ ಮೂಲಕ ಹೇಳ ಹೊರಟಿದ್ದಾರೆ. ಕೆಂಪಮ್ಮನ ಕೋರ್ಟ್ ಕೇಸ್ ಎಂಬ ಹೆಸರಿನ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದು ನಿರ್ದೇಶನದ ಜವಾಬ್ದಾರಿಯನ್ನು ಚಂದ್ರಶೇಖರ್ ಅವರು ವಹಿಸಿಕೊಂಡು ಈ ಚಿತ್ರವನ್ನು ಪೂರೈಸಿದ್ದಾರೆ.   ಹಿರಿಯ ಕಲಾವಿದೆ ರಾಧಾ ರಾಮಚಂದ್ರ ಚಿತ್ರದಲ್ಲಿ ಕೆಂಪಮ್ಮನ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಸಿದ್ದಾರ್ಥ ಹಾಗೂ ವಿಶ್ವ ಎಂಬ ಯುವ ಕಲಾವಿದರು ಈ ಚಿತ್ರದಲ್ಲಿ ಪ್ರಗತಿಪರ ರೈತರಾಗಿ ಕಾಣಿಸಿಕೊಂಡಿದ್ದಾರೆ.

ಚಂದ್ರಶೇಖರ್ ಅವರ ಪುತ್ರಿ ತಾನಿಯಾ ಚಂದ್ರಶೇಖರ್ ಹಾಗೂ ಸಿಹಿಕಹಿ ಚಂದ್ರು ಅವರ ಪುತ್ರಿ ಹಿತಾಚಂದ್ರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.   ಈ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಚಂದ್ರಶೇಖರ ಅವರ ಗೆಳೆಯರಾದ ಶ್ರೀನಾಥ್ ಹಾಗೂ ಜೈ ಜಗದೀಶ್ ಇಬ್ಬರೂ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಬೆಂಗಳೂರು, ರಾಮನಗರ ಸುತ್ತಮುತ್ತ 48 ದಿನಗಳ ಕಾಲ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ಮಮತಾ ಸುಂದರಾಜು ಹಾಗೂ ಸುಂದರಾಜು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀಧರ ವಿ.ಸಂಭ್ರಮ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.
ವಿತರಕರಾದ ಜಯಣ್ಣ ಅವರು ಈ ಚಿತ್ರವನ್ನು ವೀಕ್ಷಿಸಿ ರಾಜ್ಯಾದ್ಯಂತ ಬಿಡುಗಡೆ ಮಾಡಲು ಒಪ್ಪಿದ್ದಾರೆ. ಇತ್ತೀಚೆಗಷ್ಟೇ ಟೊರಾಂಟೊ ಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶಗೊಂಡಿತು.

► Follow us on –  Facebook / Twitter  / Google+

Facebook Comments

Sri Raghav

Admin