ಬೆಳ್ಳಿ ಹುಡುಗಿ ಸಿಂಧುಗೆ ಸಿಕ್ತು 60 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರು ಗಿಫ್ಟ್

ಈ ಸುದ್ದಿಯನ್ನು ಶೇರ್ ಮಾಡಿ

sindhu

ಹೈದರಾಬಾದ್ ಆ20 -ರಿಯೋ ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಗೆದ್ದು ಭಾರತಕ್ಕೆ ಹೆಮ್ಮೆ ತಂದ ಪಿವಿ ಸಿಂಧು ಅವರಿಗೆ 60 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರು ಗಿಫ್ಟ್ ಸಿಕ್ಕಿದೆ. ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ವಿ.ಚಮುಂಡೇಶ್ವರನಾಥ್ ಈ ಬಹುಮಾನ ಘೋಷಿಸಿದ್ದಾರೆ.  ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಯಾರೇ ಕ್ರೀಡಾಪಟು ರಿಯೋದಲ್ಲಿ ಪದಕ ಗೆದ್ದರೆ ಅವರಿಗೆ ಬಿಎಂಡಬ್ಲ್ಯೂ ಕಾರು ನೀಡುವುದಾಗಿ ಈ ಹಿಂದೆಯೇ ಘೋಷಣೆ ಮಾಡಿದ್ದರು.  2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಸೈನಾ ನೆಹ್ವಾಲ್ ಅವರಿಗೂ ಬಿಎಂಡಬ್ಲ್ಯೂ ಕಾರನ್ನು ಸಚಿನ್ ತೆಂಡೂಲ್ಕರ್ ನೀಡಿ ಗೌರವಿಸಿದ್ದರು. ಈಗ ಸಚಿನ್ ಮೂಲಕವೇ ಸಿಂಧುಗೆ ಬಿಎಂಡಬ್ಲ್ಯೂ ಕಾರನ್ನು ಗಿಫ್ಟ್ ನೀಡಲು ಚಮುಂಡೇಶ್ವರನಾಥ್ ಮುಂದಾಗಿದ್ದಾರೆ.
1 ಕೋಟಿ ಬಹುಮಾನ:
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರ ಶೇಖರ್ ರಾವ್ ಸಿಂಧುಗೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಪ್ರಕಟಿಸಿದ್ದಾರೆ.
ಖೇಲ್ ರತ್ನವೂ ಒಲಿಯಿತು:
ಬೆಳ್ಳಿ ಪದಕ ಗೆಲ್ಲುವ ಮೂಲಕ ಸಿಂಧು ಈ ಬಾರಿಯ ಖೇಲ್ ರತ್ನ ಪ್ರಶಸ್ತಿ ಲಭಿಸಿದೆ. ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರಾದ ಎಲ್ಲ ಕ್ರೀಡಾ ಪಟುಗಳಿಗೆ ಖೇಲ್ ರತ್ನ ನೀಡುವುದಾಗಿ ಕೇಂದ್ರ ಸರ್ಕಾರ ಮೊದಲೇ ಘೋಷಿಸಿತ್ತು. ಮೊದಲ ಒಲಿಂಪಿಕ್ಸ್ ಕೂಟದಲ್ಲಿ ಸಿಂಧು ಭಾರತದ ಬ್ಯಾಡ್ಮಿಂಟನ್‍ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಸಿಂಧು ಅವರ ಯಶಸ್ಸಿಗೆ ಕೋಚ್ ಗೋಪಿಚಂದ್ ಅವರು ಕಾರಣರಾಗಿದ್ದಾರೆ ಹೀಗಾಗಿ ಇಬ್ಬರಿಗೂ ಹೃದಯಪೂರ್ವಕ ಅಭಿನಂದನೆಗಳು ಎಂದು ಅಖಿಲೇಶ್ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin

Comments are closed.