ಬೆಸ್ಕಾಂ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

bescom
ಯಲಹಂಕ, ಅ.23- ಬಾಕಿ ಉಳಿಸಿಕೊಂಡಿದ್ದ ವಿದ್ಯುತ್ ಬಿಲ್ ಹಣ ಪಾವತಿಸದಿದ್ದರೆ ಸಂಕರ್ಪ ಕಡಿತಗೊಳಿಸುವುದಾಗಿ ಹೇಳಿದ ಬೆಸ್ಕಾಂ ಅಧಿಕಾರಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಅನಂತಪುರ ಬೆಸ್ಕಾಂ ಕಚೇರಿ ವ್ಯಾಪ್ತಿಯಲ್ಲಿ ನಡೆದಿದೆ. ಬಿಲ್ ಕಲೆಕ್ಟರ್ ಮೋಹನ್ ಹಲ್ಲೆಗೊಳಗಾದ ಅಕಾರಿ. ಕಳೆದ ಕೆಲದಿನಗಳಿಂದ ಹಣ ಪಾವತಿ ಮಾಡದೆ ವಿದ್ಯುತ್ ಬಾಕಿ ಉಳಿಸಿಕೊಂಡಿದ್ದ ದಿನೇಶ್ ಚೌದರಿ ಎಂಬಾತನಿಗೆ ಮೋಹನ್ ಈ ಮೊದಲೂ ಎರಡು ಬಾರಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಸಾಕಷ್ಟು ಬಾಕಿ ಉಳಿದಿದ್ದರಿಂದ ವಿದ್ಯುತ್ ಬಿಲ್ ಪಾವತಿಸಿ ಇಲ್ಲದಿದ್ದರೆ ಸಂಪರ್ಕ ಕಡಿತಗೊಳಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಕುಪಿತಗೊಂಡ ದಿನೇಶ್ ಚೌದರಿ ಕಬ್ಬಿಣದ ರಾಡ್‌ನಿಂದ ಬೆಸ್ಕಾಂ ಅಕಾರಿ ಮೋಹನ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಗಾಯಗೊಂಡಿದ್ದ ಮೋಹನ್ ಅವರಿಗೆ ಸ್ಥಳೀಯ  ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ಹಲ್ಲೆ ನಡೆಸಿದ ದಿನೇಶ್ ಚೌದರಿ ವಿರುದ್ಧ ಬೆಸ್ಕಾನ ಎ.ಇ.ಇ ಮನಮೋಹನ ಪ್ರಿಯಾಂಕ ಸಿಬ್ಬಂದಿ ಮೇಲಿನ ಹಲ್ಲೆಯನ್ನು ಖಂಡಿಸಿದ್ದು, ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದು ವರಿಸಿದ್ದಾರೆ. ಪ್ರತಿಕ್ರಿಯಿಸಿರುವ ಎ.ಇ.ಇ ಮನಮೋಹನ ಪ್ರಿಯಾಂಕ, ಒಂದೆರೆಡು ಬಾರಿ ಮಾನವೀಯತೆಯಿಂದ ನಮ್ಮ ಅಕಾರಿಗಳು ಸಂಪರ್ಕ ಕಡಿತ ಗೊಳಿಸದೆ ಇದ್ದಲ್ಲಿ ನಮ್ಮನ್ನು ಅಸಹಾಯಕರೆದು ಪರಿಗಣಿಸುತ್ತಾರೆ ಮತ್ತು ಸಲಿಗೆ ಈ ರೀತಿಯ ಅನಾಹುತಗಳಿಗೆ ದಾರಿಮಾಡಿಕೊಡುತ್ತದೆ. ಸಾರ್ವಜನಿಕ ವಲಯದಲ್ಲಿದ್ದು ಸರ್ಕಾರದ ಕೆಲಸ ಕಠಿಣವಾದರೂ ಧೈರ್ಯದಿಂದ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸುವಂತೆ ಕಿವಿಮಾತು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin