ಬೆ.ವಿ.ಕಂ ಮತ್ತು ಗ್ರಾಹಕರ ನಡುವೆ ಗಲಾಟೆ : ದೂರು

ಈ ಸುದ್ದಿಯನ್ನು ಶೇರ್ ಮಾಡಿ

bescom

ಚಿಂತಾಮಣಿ, ಆ.29-ನಗರದಲ್ಲಿ ನಡೆದ ಬೆ.ವಿ.ಕಂ ಮತ್ತು ಗ್ರಾಹಕರ ನಡುವೆ ವಿದ್ಯುತ್ ಬಾಕಿ ಬಿಲ್ ಕೇಳಿದ ವಿಚಾರದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ನಗರಠಾಣೆಯಲ್ಲಿ ದೂರು ಮತ್ತು ಪ್ರತಿದೂರುಗಳು ದಾಖಲಾಗಿವೆ.  ನಗರದ ಉಪವಿಭಾಗದ ವ್ಯಾಪ್ತಿಯ ಟ್ಯಾಂಕ್‍ಬಂಡ್ ರಸ್ತೆಯಲ್ಲಿ ಬೆಂ.ವಿ. ಕಂಪನಿಯ ಸಿಬ್ಬಂದಿಯ ಮೇಲೆ ಗ್ರಾಹಕರ ಕುಟುಂಬವೊಂದು ಮಾರಣಾಂತಿಕ ಹಲ್ಲೆ ನಡೆಸಿತ್ತು. ಹಲ್ಲೆಗೊಳಗಾದ ನೌಕರರಾದ ಮೀಟರ್ ಮಾಪಕ ಮತ್ತು ಓದಗ ಎನ್.ವಿ.ರಘು ಮತ್ತು ಮಾರ್ಗದಾಳು ಎಂ.ನಾಗರಾಜ್ ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗಾಯಾಳುಗಳು ನಗರದ ಟ್ಯಾಂಕ್‍ಬಂಡ್ ರಸ್ತೆಯ ವಿದ್ಯುತ್ ಸ್ಥಾವರವಾದ ಸಿಹೆಚ್ 29726 ಗ್ರಾಹಕರಾದ ಸಾಧಕ್‍ಪಾಷಾ, ಸಿಕಂದರ್, ಬಾಬು, ಶರೀಫ್, ಮತ್ತು ರಜಿಯಾ ಬೇಗಂ ರವರ ಮೇಲೆ ದೂರು ಸಲ್ಲಿಸಿದ್ದು ಕೊಲೆ ಯತ್ನ, ಅಟ್ರಾಸಿಟಿ ಮತ್ತು ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದೆ. ಗ್ರಾಹಕರಾದ ರಜಿಯಾ ಬೇಗಂ ದೂರು ಸಲ್ಲಿಸಿ ಮೀಟರ್ ಮಾಪಕ ಮತ್ತು ಓದಗ ಎನ್.ವಿ.ರಘು ಮತ್ತು ಮಾರ್ಗದಾಳು ಎಂ.ನಾಗರಾಜ್ ರವರು ನಮ್ಮ ಮನೆಗೆ ಬಂದು ಗಲಾಟೆ ಮಾಡಿ ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಪ್ರತಿ ದೂರು ಸಲ್ಲಿಸಿದ್ದಾರೆ.

ರಾಜಿ ಸಂಧಾನ ವಿಫಲ:-ಬೆ.ವಿ.ಕಂಪನಿಯ ಇಬ್ಬರ ಸಿಬ್ಬಂದಿಯ ಮೇಲೆ ಗ್ರಾಹಕರು ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಹಾಗೂ ಪೆÇಲೀಸರು ಪ್ರಕರಣ ದಾಖಲು ಮಾಡದೆ ರಾಜಿ ಸಂಧಾನಕ್ಕೆ ಮುಂದಾದ ಹಿನ್ನೆಲೆಯಲ್ಲಿ ಬೆಸ್ಕಾಂ ನೌಕರರು ಮತ್ತು ಸಿಬ್ಬಂದಿ ಹಲ್ಲೆ ನಡೆಸಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಕಚೇರಿಯ ಮುಂದೆ ಧರಣಿ ನಡೆಸಿದ್ದರು. ಹಲವು ಮುಖಂಡರು ರಾಜಿ ಸಂಧಾನ ನಡೆಸಿದರೂ ಯತ್ನ ವಿಫಲವಾಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin