ಬೇಜವಾಬ್ದಾರಿಯಿಂದ ಕೆಲಸ ನಿರ್ವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

kunigal

 

ಕುಣಿಗಲ್,ಆ.26-ಸರ್ಕಾರಿ ಅಧಿಕಾರಿಗಳು ಆತ್ಮಸಾಕ್ಷಿಯಿಂದ ಕೆಲಸ ನಿರ್ವಹಿಸಬೇಕು. ಬೇಜವಾಬ್ದಾರಿಯಿಂದ ನಡೆದುಕೊಂಡಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಶಾಸಕ ಡಿ.ನಾಗರಾಜಯ್ಯ ಅಧಿಕಾರಿಗಳಿಗೆ ಸಲಹೆ ನೀಡಿದರು.  ಅವರು ತಾಲ್ಲೂಕಿನ ಅಮೃತೂರು ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೀಡಲಾಗುತ್ತಿರುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಅದೇ ರೀತಿ ಅಧಿಕಾರಿಗಳು ಕೂಡ ಪ್ರಾಮಾಣಿಕವಾಗಿ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಬೇಕು, ವಿನಾಕಾರಣ ಬೇಜವಾಬ್ದಾರಿಯಾಗಿ ನಡೆದುಕೊಳ್ಳಬಾರದು. ಅಂತಹ ದೂರುಗಳು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅದೇ ರೀತಿ ಸಾರ್ವಜನಿಕರು ಕೂಡ ಎಲ್ಲದಕ್ಕೂ ರಾಜಕೀಯ ಬೆರಸದೆ ಅಧಿಕಾರಿಗಳನ್ನು ಹೆದರಿಸಿ ಬೆದರಿಸಿದೆ ಕ್ರಮಬದ್ಧವಾಗಿ ಸರ್ಕಾರದ ಯೋಜನೆ ಮತ್ತು ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬೇಸರ ಮಾಡಿಕೊಂಡು ಮನೆಯಲ್ಲಿ ಕೂರಬಾರದು. ಇದರಿಂದ ನಿಮಗೆ ನಷ್ಟವೇ ಹೊರತು ಅಧಿಕಾರಿಗಳಿಗಲ್ಲ ಎಂದು ಸಲಹೆ ನೀಡಿದರು. ಕೇಂದ್ರ ಸರ್ಕಾರದ ಯೋಜನೆಯಾದ ಬಿಪಿಎಲ್ ಕಾರ್ಡ್‍ದಾರರಿಗೆ ಉಚಿತ ಗ್ಯಾಸ್ ಅನಿಲ ಸಂಪರ್ಕ ವಿಷಯಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಕೆಲವು ಕಾಂಗ್ರೆಸ್ ಕಾರ್ಯಕರ್ತರು ತಾವೇ ಖುದ್ದಾಗಿ ಮನೆಗಳಿಗೆ ಭೇಟಿ ನೀಡಿ ಇದು ಸಂಸದರು ನೀಡುತ್ತಿರುವ ಕೊಡುಗೆ ಎಂದು ಕರಪತ್ರ ಮುದ್ರಿಸಿ ಹಂಚುತ್ತಿದ್ದಾರೆ. ಅಲ್ಲದೆ ಗ್ಯಾಸ್ ಅನಿಲ ಸಂಪರ್ಕವನ್ನು ಕೊಡಿಸುವುದಾಗಿ ಹೇಳಿ ಮೂರರಿಂದ ನಾಲ್ಕೂವರೆ ಸಾವಿರ ಹಣ ವಸೂಲಿ ಮಾಡುತ್ತಿರುವ ದೂರುಗಳು ವ್ಯಾಪಕವಾಗಿವೆ. ಕೂಡಲೇ ಇಂತಹ ಅಕ್ರಮ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಅವರಿಗೆ ಸೂಚಿಸಿದರು.

ಸಭೆಯಲ್ಲಿ ಅಮೃತೂರು ಹೋಬಳಿಯ ವಿವಿಧ ಗ್ರಾಮಗಳಿಂದ ಬಂದಿದ್ದ ಸಾರ್ವಜನಿಕರು, ಮಹಿಳೆಯರು, ವೃದ್ಧರು, ಶಾಸಕರಿಗೆ ತಮ್ಮ ಅಹವಾಲು ನೀಡಿದರು. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿದರು. ಬಗರ್ ಹುಕುಂ ಖಾತೆ , ಪಹಣಿ ಇನ್ನಿತರೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅರ್ಜಿದಾರರು ಕಚೇರಿಯಲ್ಲಿ ತಮ್ಮನ್ನು ಭೇಟಿಯಾಗುವಂತೆ ತಿಳಿಸಿದರು. ಸಭೆಯಲ್ಲಿ ಇಒ ವಿಜಿಗೌಡ, ಜಿಪಂ ಸಹಾಯಕ ಇಂಜಿನಿಯರ್ ವೆಂಕಟೇಶ್, ಕಂದಾಯಾಧಿಕಾರಿ ಉಮೇಶ್, ಗ್ರಾಪಂ ಕಾರ್ಯದರ್ಶಿ ಕೃಷ್ಣಪ್ಪ , ಜಿಪಂ ಸದಸ್ಯೆ ಮಂಜುಳ ಶೇಷಗಿರಿ, ತಾಪಂ ಸದಸ್ಯ ದಿನೇಶ್ ಮತ್ತಿತರರು ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin