ಬೇಡಿಕೆ ಈಡೇರಿಕೆಗೆ ಕಾಡುಗೊಲ್ಲರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

kadu--kolla

ಚಿತ್ರದುರ್ಗ, ಆ.9-ಅಡವಿಗೊಲ್ಲ ಪರ್ಯಾಯ ಪದವಾಗಿ ಕಾಡುಗೊಲ್ಲ ಪದವನ್ನು ಜಾತಿ ಪಟ್ಟಿಯಲ್ಲಿ ಸೇರಿಸಿ ಜಾತಿ ಪ್ರಮಾಣ ಪತ್ರ ನೀಡಬೇಕು. ಕಾಡುಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಮೂಲಭೂತ ಸವಲತ್ತುಗಳನ್ನು ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾಡುಗೊಲ್ಲರು ಬೃಹತ್ ಪ್ರತಿಭಟನೆ ನಡೆಸಿದರು.ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ ವಿ.ನಾಗಪ್ಪಅವರು, ಕನಕ ವೃತ್ತದಲ್ಲಿ ಕರಿಯ ಕಂಬಳಿ ಗದ್ದುಗೆ ಹಾಸಿ ಕಾಡುಗೊಲ್ಲರ ಬುಡಕಟ್ಟು ಜನಪದ ಸಂಪ್ರದಾಯದಂತೆ ಕುಲದೈವಗಳಿಗೆ ಪೂಜೆ ಸಲ್ಲಿಸಿ, ಕಾಡುಗೊಲ್ಲರ ಯುವ ಸೇನೆಯ ಗೌರವಾಧ್ಯಕ್ಷ ಶಿವುಯಾದವ್ ಅವರಿಗೆ ವೀಳ್ಯ ನೀಡಿ ಚಾಲನೆ ನೀಡಿದರು.
ಮಾಗಡಿ ತಾಲ್ಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ದೊಡ್ಡಬಾಣಗೆರೆ ಮಾರಣ್ಣ, ಕುಲದೈವ ಜುಂಜಪ್ಪ ಸ್ವಾಮಿ, ಚಿತ್ತಯ್ಯ, ಕಾಟಯ್ಯ, ಎತ್ತಯ್ಯ ಸ್ವಾಮಿ ದೇವರುಗಳ್ನನು ಕರೆಯುವ ಜಾಡಿ ಪದಗಳನ್ನು ಹಾಡಿದರು.
ಕಾಡು ಗೊಲ್ಲರ ಸೇನೆಯ ರಾಜ್ಯಾಧ್ಯಕ್ಷ ಜಿ.ವಿ.ರಮೇಶ್ ಮಾತನಾಡಿ, ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ರಾಜ್ಯ ಸರ್ಕಾರ ಮಾಡಿರುವ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಪರಿಗಣಿಸುವಂತೆ ಸಂಸದರು ಒತ್ತಾಯ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿ ನಂತರ ದೆಹಲಿಯ ಪಾರ್ಲಿಮೆಂಟ್ ಭವನದ ಮುಂದೆ ಪ್ರತಿಭಟನೆ ನಡೆಸಿ , ಕಾಡುಗೊಲ್ಲರಿಗೆ ಎಸ್‍ಟಿ ಸ್ಥಾನಮಾನಕ್ಕಾಗಿ ಆಗ್ರಹಿಸಲಾಗುವುದು ಎಂದು ಕಾಡುಗೊಲ್ಲರ ಯುವ ಸೇನೆಯ ರಾಜ್ಯಾಧ್ಯಕ್ಷ ಜಿ.ವಿ.ರಮೇಶ್ ಆಗ್ರಹಿಸಿದರು.ಕಾಡುಗೊಲ್ಲರ ಯುವ ಸೇನೆಯ ಗೌರವಾಧ್ಯಕ್ಷ ಶಿವುಯಾದವ್, ಮುಖಂಡರಾದ ವೇಣುಕಲ್ಲು ಗುಡ್ಡದ ನಾಗಜ್ಜ, ವಕೀಲ ಸುನಿಲ್ ದತ್ ಯಾದವ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ರಾಜಕುಮಾರ, ಮೀಸೆ ಮಹಲಿಂಗಪ್ಪ, ರಾಜ್ಯ ಕಾಡುಗೊಲ್ಲರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಿಕ್ಕಪ್ಪ, ತುಮಕೂರು ಜಿಲ್ಲಾ ಕಾಡುಗೊಲ್ಲರ ಸಂಘದ ಅಧ್ಯಕ್ಷ ಚಂಗಾವರದ ಕರಿಯಪ್ಪ, ಕರ್ನಾಟಕ ಕಾಡುಗೊಲ್ಲರ ಚಿಂತನಾ ಚಾವಡಿಯ ಅಧ್ಯಕ್ಷ ಪೆನ್ನೋಬನ ಹಳ್ಳಿ ಜಯರಾಮು ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

Facebook Comments

Sri Raghav

Admin