ಬೇಡಿಕೆ ಈಡೇರಿಸದಿದ್ದರೆ ಸರಕು ಸಾಗಾಣೆ ಬಂದ್ : ಲಾರಿ ಮಾಲೀಕರ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Lorry-Straike--01

ಬೆಂಗಳೂರು,ಅ.27-ಸರ್ಕಾರವು ಶೀಘ್ರವಾಗಿ ಲಾರಿ ಮಾಲೀಕರ ಸಮಸ್ಯೆಗಳನ್ನು ಈಡೇರಿಸದಿದ್ದರೆ ನ.10ರಿಂದ ಇಡೀ ರಾಜ್ಯಾದ್ಯಂತ ಸರಕು ಸಾಗಾಣೆ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟ ಮುಷ್ಕರವನ್ನು ಆರಂಭಿಸುತ್ತೇವೆ ಎಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಷಿಯೇಷನ್ ಅಧ್ಯಕ್ಷ ಬಿ.ಚನ್ನರೆಡ್ಡಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟು ತಿಂಗಳ ಹಿಂದೆ ಆರ್‍ಟಿಒ ಕಚೇರಿಗಳಲ್ಲಿ ವಾಹನ ಮಾಲೀಕರ ಕೆಲಸ ಕಾರ್ಯಗಳಿಗೆ ವಿಧಿಸುತ್ತಿದ್ದ ಫೀಜ್‍ಗಳನ್ನು ಮೂರು ಪಟ್ಟು ಹೆಚ್ಚಿಸಿರುವುದನ್ನು ಸರ್ಕಾರದ ಗಮನಕ್ಕೆ ತಂದು ಇದನ್ನು ಕಡಿಮೆಗೊಳಿಸಿ ಹಿಂದೆ ನಿಗಧಿಪಡಿಸಿದ್ದ ದರಗಳನ್ನು ಉಳಿಸಿಕೊಂಡು ಲಾರಿ ಮಾಲೀಕರ ಹೊರೆಯನ್ನು ಕಡಿಮೆ ಮಾಡುವಂತೆ ಹೇಳಿಕೊಂಡಿದ್ದವು.
ಸರ್ಕಾರ ಇದು ಕೇಂದ್ರ ಸರ್ಕಾರದ ಆದೇಶದಂತೆ ಹೆಚ್ಚಿಸಿರುವುದರಿಂದ ರಾಜ್ಯ ಸರ್ಕಾರದ ವತಿಯಿಂದ ದರಗಳನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು ಎಂದರು.

ಆದ್ದರಿಂದ ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ಶುಲ್ಕವನ್ನು ಅವೈಜ್ಞಾನಿಕ ವಸೂಲಿ ಮಾಡುತ್ತಿರುವುದನ್ನು ಸರಿಪಡಿಸಬೇಕು. ಹಣವನ್ನು ಕೊಳ್ಳೆ ಹೊಡೆಯುತ್ತಿರುವ ಆರ್‍ಟಿಒ ಸ್ಕ್ವಾಡ್‍ನನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಇತ್ತೀಚೆಗೆ ಸರ್ಕಾರದ ಸುತ್ತೋಲೆಯನ್ನು ಹೊರಡಿಸಿ 15 ವರ್ಷಗಳಿಗೆ ಮೇಲ್ಪಟ್ಟ ಭಾರೀ ವಾಹನಗಳ ಫಿಟ್‍ನೆಸ್‍ನನ್ನು ನವೀಕರಿಸಬೇಕಾಗುತ್ತದೆ. ನೆಲಮಂಗಲದ ಆರ್‍ಟಿಒ ಕಚೇರಿಯಲ್ಲಿ ಹೊಸದಾಗಿ ಖಾಸಗಿ ವ್ಯಕ್ತಿಗಳು ನಿರ್ಮಿಸಿರುವ ತಪಾಸಣಾ ಕೇಂದ್ರದಲ್ಲಿ ಕಡ್ಡಾಯವಾಗಿ ತಪಾಸಣೆ ಮಾಡಿಸಬೇಕೆಂದು ಆದೇಶ ಹೊರಡಿಸಿದೆ.

ಈ ತಪಾಸಣೆ ಸರಿ ಇದೆಯೇ ಎಂಬ ವರದಿ ಮೇರೆಗೆ ಮಾತ್ರ ಫಿಟ್‍ನೆಸ್ಸ್ ಸರ್ಟಿಫಿಕೇಟ್‍ನ್ನು ಲಾರಿ ಮಾಲೀಕರಿಗೆ ತೊಂದರೆಯಾಗುತ್ತದೆ. ಆದಕಾರಣ ತಪಸಣಾ ಕೇಂದ್ರದಲ್ಲಿ ಅರ್ಹತಾಪತ್ರ ಕೊಡಲು ಏರ್ಪಾಡು ಮಾಡಿಕೊಡಿ ಎಂದು ಮನವಿ ಮಾಡಿದರು.  ಪತ್ರಿಕಾಗೋಷ್ಠಿಯಲ್ಲಿ ಅಸೋಷಿಯೇಷನ್‍ನ ಪದಾಧಿಕಾರಿಗಳಾದ ಕೆ.ವೆಂಕಟರಾವ್, ಎಂ.ಶ್ರೀನಿವಾಸ್‍ರಾವ್, ಕೆ.ಎಂ.ಗೋಪಾಲಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin