ಬೇಲೂರಿನಲ್ಲಿ ಶ್ರೀ. ಹೆಚ್.ಡಿ,ದೇವೇಗೌಡರ ವೃತ್ತ

ಈ ಸುದ್ದಿಯನ್ನು ಶೇರ್ ಮಾಡಿ

devegowda

ಬೇಲೂರು, ಸೆ.14- ಕನ್ನಡ ನಾಡಿನ ಮಣ್ಣಿನ ಮಗ ರಾಜ್ಯದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರನ್ನು ತಾಲ್ಲೂಕಿನ ಚನ್ನಕೇಶವ ದೇವಾಲಯದ ಹಿಂಭಾಗದ ವೃತ್ತಕ್ಕೆ ಇಡುವ ಮೂಲಕ ಪುರಸಭೆ ಉತ್ತಮ ಕೆಲಸ ಮಾಡಿದೆ ಎಂದು ಹೆಚ್‍ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಎ.ನಾಗರಾಜ್ ಹೇಳಿದರು. ನೂತನವಾಗಿ ನಾಮಕರಣ ಮಾಡಿರುವ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ವೃತ್ತದ ನಾಮ ಫಲಕವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಒಂದು ಚಿಕ್ಕ ಗ್ರಾಮದಲ್ಲಿ ಹುಟ್ಟಿ, ಸದಾ ರೈತರ ಪರವಾಗಿ ಚಿಂತಿಸಿ ಹೊರಾಟದ ಮೂಲಕವೆ ರಾಜಕಾರಣಕ್ಕೆ ಬಂದು ಯಾರು ಸಾಧನೆ ಮಾಡಲಾಗದಂತಹ ಉತ್ತಮ ಕೆಲಸಗಳಿಂದ ತಮ್ಮನ್ನು ತಾವು ಗುರುತಿಸಿ ಕೊಂಡವರು.
ಸದಾ ಬಡವರ ದಲಿತರ ದುರ್ಬಲ ವರ್ಗದವರ ಪರವಾಗಿಯೆ ಚಿಂತಿಸುವ ಇವರು ಜಿಲ್ಲೆ ಸೇರಿದಂತೆ ದೇಶಕ್ಕೆ ತಮ್ಮದೆ ಆದ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.ತಾಲೂಕು ಜೆಡಿಎಸ್ ಅಧ್ಯಕ್ಷ ತೋ.ಚ.ಸುಬ್ಬರಾಯ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರತಿಯೊಂದು ಕ್ಷೇತ್ರದಲ್ಲಿಯು ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ. ಅಲ್ಲದೆ ಇವರು ದೇಶದ ಏಕೈಕ ಕನ್ನಡಿಗ ಪ್ರಧಾನಿಯಾಗಿ ಕರ್ನಾಟಕದ ಕೀರ್ತಿಯನ್ನು ದೆಹಲಿಯ ಕೆಂಪುಕೋಟೆ ಮೇಲೆ ಹಾರಿಸಿದವರು ಎಂದು ತಿಳಿಸಿದರು.ಪುರಸಭೆ ಮಾಜಿ ಅಧ್ಯಕ್ಷ ಟಿ.ಎ.ಶ್ರೀನಿಧಿ, ಸದಸ್ಯೆ ಮುದ್ದಮ್ಮ, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಹೆಚ್.ಮಹೇಶ್ ಇನ್ನಿತರರಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin