ಬೇಲೂರಿನ ಚನ್ನಕೇಶವ ದೇಗುಲದಲ್ಲಿ ತೆಲಗು ಚಿತ್ರ ‘ದುವ್ವಾಡ ಜಗನ್ನಾಥ್’ ಚಿತ್ರೀಕರಣಕ್ಕೆ ವಿರೋಧ

ಈ ಸುದ್ದಿಯನ್ನು ಶೇರ್ ಮಾಡಿ

Beluru

ಬೇಲೂರು, ಫೆ.17- ತೆಲಗು ಚಿತ್ರವೊಂದರ ಚಿತ್ರೀಕರಣ ಸಂದರ್ಭದಲ್ಲಿ ವೈಷ್ಣವ ದೇವಸ್ಥಾನದಲ್ಲಿ ಶೈವ ಸಂಬಂಧ ವಿಗ್ರಹಗಳನ್ನಿಟ್ಟು ನಮ್ಮ ಆಚಾರ-ವಿಚಾರ ಹಾಗೂ ಧಾರ್ಮಿಕ ಮನೋಭಾವಕ್ಕೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ ಎಂದು ದೇವಾಲಯದ ಪ್ರಧಾನ ಆರ್ಚಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.  ಇಲ್ಲಿನ ಇತಿಹಾಸ ಪ್ರಸಿದ್ಧ ಚನ್ನಕೇಶವ ದೇವಾಲಯದಲ್ಲಿ ದೂವಾಡ ಜಗನ್ನಾಥ್ (ಡಿ.ಜೆ.) ಎಂಬ ತೆಲುಗು ಚಲನಚಿತ್ರ ಚಿತ್ರೀಕರಣವಾಗುತ್ತಿದ್ದು, ಚಿತ್ರೀಕರಣದ ತಂಡದವರು ದೇವಾಲಯದೊಳಗೆ ಭಕ್ತಾದಿಗಳು ಮತ್ತು ಪ್ರವಾಸಿಗರಿಗೆ ಪ್ರವೇಶ ನೀಡದ ಕಾರಣ ದೇವಾಲಯ ವೀಕ್ಷಿಸಲು ಬಂದವರು ಬಾಗಿಲಿನಲ್ಲೆ ನಿಂತು ತೆರಳುವಂತಾಗಿದೆ.

ಅಲ್ಲದೆ, ಚನ್ನಕೇಶವಸ್ವಾಮಿ ದೇವಾಲಯದೊಳಗೆ ಯಾವುದೇ ಬೇರೆ ಧರ್ಮ ಹಾಗೂ ಸಂಸ್ಕøತಿಯ ವಿಗ್ರಹಗಳನ್ನು ಇಡಬಾರದು ಎಂಬ ನಿಯಮವಿದೆ. ಆದರೂ ದೇವಾಲಯದ ಸಂಪ್ರದಾಯಕ್ಕೆ ವಿರೋಧವಾಗಿ ತೆಲಗು ಚಿತ್ರ ತಂಡದವರು ಶೈವ ಸಂಬಂಧ ವಿಗ್ರಹಗಳನ್ನು ವೈಷ್ಣವ ದೇವರಿಗೆ ನಡೆಯುವ ಉತ್ಸವ ಮಂಟಪದಲ್ಲಿ ತಂದಿಟ್ಟಿದ್ದಲ್ಲದೆ, ದೇವಾಲಯದಲ್ಲಿ ಬೃಹತ್ ಶಿವಲಿಂಗ ಹಾಗೂ ಶಿವನ ವಿಗ್ರಹಗಳನ್ನು ತಂದು ಇಡಲಾಗಿದ್ದು, ಹೋಮದ ಕುಂಡದಲ್ಲಿ ಯಜ್ಞ ಮಾಡಲಾಗುತ್ತಿದೆ ಎಂದು ದೂರಿದರು. ಈ ಚಿತ್ರೀಕರಣದಿಂದ ದೇವಾಲಯಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಸಾಕಷ್ಟು ಅನಾನೂಕೂಲವಾಗುತ್ತಿದ್ದು, ಇಲ್ಲಿಗೆ ಬರುವಂತಹ ಪ್ರವಾಸಿಗರು ದೇವಾಲಯದ ಹೊರ ಭಾಗದಲ್ಲೆ ನಿಂತು ನೋಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟ ಪುರಾತತ್ವ ಇಲಾಖೆಗೆ ಶಾಪ ಹಾಕುತ್ತಿದ್ದರು.

ದೇವಾಲಯದ ಅರ್ಚಕರು ವೈಷ್ಣವ ಸಂಪ್ರದಾಯಕ್ಕೆ ವಿರೋಧವಾಗಿ ಚಿತ್ರ ತಂಡದವರು ದೇವಾಲಯದಲ್ಲಿ ನಡೆದುಕೊಳ್ಳುತ್ತಿದ್ದು, ಕೂಡಲೇ ಬೇರೆ ವಿಗ್ರಹಗಳನ್ನು ತೆರವುಗೊಳಿಸಿ ನಮ್ಮ ಸಂಪ್ರದಾಯ ಉಳಿಸಿಕೊಡಬೇಕು. ಒಂದು ವೇಳೆ ವಿಗ್ರಹಗಳನ್ನು ತೆರವು ಮಾಡದಿರುವ ಬಗ್ಗೆ ಸಾರ್ವಜನಿಕರಿಂದ, ಭಕ್ತಾದಿಗಳಿಂದ ಆಕ್ಷೇಪಗಳು ಬಂದರೆ ಅದಕ್ಕೆ ಆಗಮಿಕ ಮಂಡಳಿ ಹೊಣೆಗಾರರಾಗುವುದಿಲ್ಲ ಎಂದು ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯುನ್‍ಲತಾ ಅವರಿಗೆ ದೂರಿನ ಪ್ರತಿ ನೀಡಿದರು.  ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯುನ್‍ಲತಾ ಚಿತ್ರತಂಡದ ವ್ಯವಸ್ಥಾಪಕರನ್ನು ಕಚೇರಿಗೆ ಕರೆಸಿ ವಿಗ್ರಹಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.   ಇದಕ್ಕೆ ತಮಗೆ ಪುರಾತತ್ವ ಇಲಾಖೆಯೂ ಅನುಮತಿ ನೀಡಿದೆ ಎಂದು ವ್ಯವಸ್ಥಾಪಕರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin