ಬೇಸಾಯ ರೈತನಿಗೆ ಭಾರವಾಗಬಾರದು : ಕೃಷ್ಣ ಭೈರೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

krishnabyregowda

ತುಮಕೂರು, ಆ.9- ಕೃಷಿ ಕಾರ್ಮಿಕರ ಕೊರತೆಯಿಂದಾಗಿ ರೈತರು ಕೃಷಿಯಿಂದ ನಷ್ಟ ಅನುಭವಿಸುವಂತಾಗಿದೆ. ಬೆಳೆದ ಬೆಳೆಗೆ ತಕ್ಕ ದರ ಸಿಗದೆ ಕಂಗಾಲಾಗಿದ್ದೇನೆ  . ಇದನ್ನು ತಪ್ಪಿಸಲು ರೈತನಿಗೆ ದುರ್ಬರವಾಗದಂತೆ ಯಾಂತ್ರೀಕೃತ ಕೃಷಿ ಕೈಗೊಳ್ಳಲು ಸರ್ಕಾರ ದೇಶದ ಮೊದಲ ಬಾರಿಗೆ ಕೃಷಿ ಯಂತ್ರಗಳನ್ನುಬಾಡಿಗೆ ನೀಡಲಾಗಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ .
ತಾಲೂಕಿನ ಬೆಳ್ಳಾವಿಯಲ್ಲಿ ವಿಎಸ್‍ಟಿ ಟಿಲ್ಲರ್ ಮತ್ತು ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕೃಷಿ ಯಂತ್ರಧಾರಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಈಗಾಗಲೇ 409 ಇಂತಹ ಕೃಷಿಯಂತ್ರ ಧಾರಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ವರ್ಷ ರಾಜ್ಯದ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ  ಈಗಾಗಲೇ 11 ಕೇಂದ್ರಗಳಿದ್ದು, ಇನ್ನೂ 20 ಕೃಷಿಯಂತ್ರಧಾರಾ ಕೇಂದ್ರಗಳನ್ನು ತೆರೆಯುವುದಾಗಿ ತಿಳಿಸಿದ ಅವರು, ರೈತರು ಕೃಷಿ ಯಂತ್ರಗಳನ್ನು ಒಕ್ಕಣೆ, ನಾಟಿ, ಕೊಯ್ಲಿಗೆ, ಕಣ ಮಾಡಲು ಬಳಸುವ ಮೂಲಕ ಕೃಷಿ ವೆಚ್ಚ ಕಡಿಮೆ ಮಾಡಿ ಹೆಚ್ಚು ಇಳುವರಿ ಪಡೆಯುವ ಮೂಲಕ ಕೃಷಿಯನ್ನು ಲಾಭದಾಯಕ ಮಾಡಬಹುದೆಂದು ಸಲಹೆ ನೀಡಿದರು.ಸಮಾರಂಭದಲ್ಲಿ ಜಂಟಿ ಕೃಷಿ ನಿರ್ದೇಶಕ ಆಂಥೋಣಿ ಮರಿಯ ಇಮ್ಯಾನ್ಯುಯಲ, ಕೃಷಿ ಉಪನಿರ್ದೇಶಕರಾದ ರೂಪಾದೇವಿ,  ತಾಲೂಕು ಹಾಗೂ ಗ್ರಾಪಂ ಸದಸ್ಯರು ಹಾಜರಿದ್ದರು.

 

Facebook Comments

Sri Raghav

Admin