ಬೈಕ್‍ಗಳನ್ನು ಕದ್ದು ಸರಗಳ್ಳತನ ಮಾಡುತ್ತಿದ್ದ ಇರಾನಿ ಗ್ಯಾಂಗ್‍ನ ಇಬ್ಬರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Irani-Gang--01

ಬೆಂಗಳೂರು, ಜೂ.13– ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೈಕ್‍ಗಳನ್ನು ಕಳ್ಳತನ ಮಾಡಿ ಅವುಗಳ ನಂಬರ್ ಪ್ಲೇಟ್ ತೆಗೆದು ನಗರದ ವಿವಿಧೆಡೆ ಸುತ್ತಾಡುತ್ತಾ ಒಂಟಿಯಾಗಿ ಓಡಾಡುವ ವೃದ್ಧರನ್ನು ಗುರಿಯಾಗಿರಿಸಿಕೊಂಡು ಸರಗಳನ್ನು ಎಗರಿಸುತ್ತಿದ್ದ ಇರಾನಿ ಗ್ಯಾಂಗ್‍ನ ಇಬ್ಬರು ಅಂತಾರಾಜ್ಯ ಸರಗಳ್ಳರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.   ಧಾರವಾಡದ ಶಹೆನ್‍ಷಾ  (28) ಮತ್ತು ಮೊಹಮ್ಮದ್(32) ಬಂಧಿತ ಸರಗಳ್ಳರಾಗಿದ್ದು, ಇವರಿಂದ 502 ಗ್ರಾಂ ತೂಕದ 15ಲಕ್ಷ   ಮೌಲ್ಯದ 15 ಮಾಂಗಲ್ಯ ಸರಗಳು ಹಾಗೂ 50 ಸಾವಿರ ರೂ. ಮೌಲ್ಯದ ಪಲ್ಸರ್ ಬೈಕ್‍ನ್ನು ವಶಪಡಿಸಿಕೊಂಡಿದ್ದಾರೆ. ಈ ಇಬ್ಬರು ಆರೋಪಿಗಳು ಈ ಹಿಂದೆ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯದ ಕೆಲವು ಕಡೆ ಹಲವಾರು ಅಪರಾಧಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.


ಇವರ ಬಂಧನದಿಂದ ಬಾಗಲಗುಂಟೆಯ ಒಂದು ಸರ ಅಪಹರಣ, ಸಂಜಯನಗರ 6, ಸುಬ್ರಹ್ಮಣ್ಯನಗರ 3, ಆರ್.ಟಿ.ನಗರ, ರಾಜಾಜಿನಗರ, ಮಲ್ಲೇಶ್ವರಂ, ಮಹಾಲಕ್ಷ್ಮಿಪುರಂ, ವಿದ್ಯಾರಣ್ಯಪುರದ ತಲಾ ಒಂದೊಂದು ಸರ ಅಪಹರಣ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ಸ್‍ಪೆಕ್ಟರ್ ಮುರುಗೇಂದ್ರಯ್ಯ ಹಾಗೂ ಸಿಬ್ಬಂದಿಗಳು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin