ಬೈಕ್‍ಗಳ ಮುಖಾಮುಖಿ  ಡಿಕ್ಕಿ : ಓರ್ವ ಸಾವು , ಇಬ್ಬರು ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

bike-accident
ಹಿರೀಸಾವೆ, ಮಾ.6- ಒಂದು ಬೈಕಿಗೆ ಮತ್ತೊಂದು ಬೈಕ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು , ಇಬ್ಬರು ಗಾಯಗೊಂಡ ಘಟನೆ ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಶ್ರವಣಬೆಳಗೊ¼ದ ಮಟ್ಟನವಿಲೆ ಗ್ರಾಮದ ನಾಗರಾಜು (55) ಮೃತ ದುರ್ದೈವಿ.ಇವರ ಜೊತೆಯಲ್ಲಿದ್ದ ರಂಗೇಗೌಡ ಮತ್ತು ಮತ್ತೊಂದು ಬೈಕಿನಲ್ಲಿದ್ದ ಲಕ್ಷ್ಮೀಶನಾಯಕ (ಈತವ ವಿಳಾಸ ತಿಳಿದಿಲ್ಲ)ನಿಗೆ ತೀವ್ರ ಪೆಟ್ಟುಬಿದ್ದಿದ್ದು ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಮಟ್ಟನವಿಲೆ ಗ್ರಾಮದ ರಂಗೇಗೌಡರ ಮಗಳ ಮದುವೆಯ ಆಹ್ವಾನ ಪತ್ರಿಕೆಯನ್ನು ವಿತರಿಸಲು ನಾಗರಾಜುನೊಂದಿಗೆ ಬೈಕಿನಲ್ಲಿ ರಾಜಾಪುರ ಗ್ರಾಮಕ್ಕೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಾಜಾಪುರ ಗೇಟ್ ಬಳಿ ನಿನ್ನೆ ಸಂಜೆ 4 ಗಂಟೆ ಸಮಯದಲ್ಲಿ ಬೆಂಗಳೂರು ಕಡೆಯಿಂದ ಅತಿವೇಗ ವಾಗಿ ಬಂದ ಬೈಕ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಎರಡೂ ಬೈಕುಗಳ ಸವಾರರು ರಸ್ತೆಗೆ ಬಿದ್ದಾಗ ಬೈಕ್ ಸವಾರರು ಹಾಗೂ ನಾಗರಾಜುಗೆ ತೀವ್ರ ಪೆಟ್ಟು ಬಿದ್ದಿದೆ. ವಿಷಯ ತಿಳಿದ ತಕ್ಷಣ ಹಿರೀಸಾವೆ ಪೊಲೀಸರು ಸ್ಥಳಕ್ಕಾಗಮಿಸಿ ತೀವ್ರ ಪೆಟ್ಟು ಬಿದ್ದಿದ್ದ ನಾಗರಾಜು ಮತ್ತು ಇನ್ನಿಬ್ಬರನ್ನೂ ಹಿರೀಸಾವೆ 108 ಆಂಬ್ಯುಲೆನ್ಸ್ ವಾಹನದಲ್ಲಿ ಹಾಸನದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಉದಯಪುರದ ಬಳಿ ನಾಗರಾಜು ಮೃತಪಟ್ಟಿರುತ್ತಾರೆ. ಉಳಿದ ಇಬ್ಬರೂ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದಾರೆ. ಮೃತದೇಹವನ್ನು ವಾಪಸ್ ಚನ್ನರಾಯಪಟ್ಟಣ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟು ಇವರ ಮಗ ಅರುಣಕುಮಾರ್ ದೂರು ನೀಡಿದ್ದು ಹಿರೀಸಾವೆ ಪೊಲೀಸ್‍ರು ದೂರನ್ನು ದಾಖಲಿಸಿಕೊಂಡಿದ್ದಾರೆ. ಈ ಅವಘಡದಲ್ಲಿ ಎರಡೂ ಬೈಕುಗಳು ಜಖಂಆಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin